ಶ್ರೀಮAಗಲ, ನ. ೨೨: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಡಿಸೆಂಬರ್ ೫ರಂದು ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿ ಕೋಲ್ ಮಂದ್ ನಮ್ಮೆಯನ್ನು ಆಚರಿಸಲಾಗುವುದು ಹಾಗೂ ಈ ಪ್ರಯುಕ್ತ ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲೆ ಪೈಪೋಟಿಯನ್ನು ಏರ್ಪಡಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಅವರು ತಿಳಿಸಿದ್ದಾರೆ.
ಸಮಾಜದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊಡವ ಸಾಂಸ್ಕೃತಿಕ ದಿನಾಚರಣೆಯ ಪ್ರಯುಕ್ತ ವರ್ಷಪ್ರತಿ ನಡೆಯುವಂತೆ ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಪೈಪೋಟಿಯಾದ ಬೊಳಕಾಟ್, ಉಮ್ಮತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ವಾಲಗತಾಟ್, ಕಪ್ಪೆಯಾಟ್ ಪೈಪೋಟಿಯನ್ನು ಚಿಕ್ಕವರು ಮತ್ತು ದೊಡ್ಡವರು ಎಂಬ ಎರಡು ವಿಭಾಗದಲ್ಲಿ ನಡೆಸಲಾಗುವುದು. ಪೈಪೋಟಿಯು ಪೂರ್ವಾಹ್ನ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ಕೊಡವ ಸಮಾಜದ ಆವರಣದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತೀತಿರ ರೋಷನ್ ಅಪ್ಪಚ್ಚು ಹಾಗೂ ಎರಡು ಡಾಕ್ಟರೇಟ್ ಪದವಿ ಪಡೆದಿರುವ ತೀತರಮಾಡ ಡಾ.ದೇವಕಿ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕ "ಪುತ್ತರಿ ಮಂದ್ ಮರೆಯೋ" ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪೈಪೋಟಿಗೆ ಹೆಸರನ್ನು ತಾ.೩೦ರ ಒಳಗಾಗಿ ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯಾಲಯದಲ್ಲಿ ನೀಡುವಂತೆ ಹಾಗೂ ದೂರವಾಣಿ ಸಂಖ್ಯೆ ೦೮೨೭೪-೨೪೯೦೭೮ ಮತ್ತು ೯೮೮೦೨೦೭೬೪೦ ಮತ್ತು ೯೪೪೮೧೩೫೫೪೧ ರಲ್ಲಿ ಕಚೇರಿ ಸಮಯದಲ್ಲಿ ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಸಭೆಯಲ್ಲಿ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ, ಉಪಾಧ್ಯಕ್ಷೆ ಚಿರಿಯಪಂಡ ಬೋಜಮ್ಮ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ,ಜಂಟಿ ಕಾರ್ಯದರ್ಶಿ ಅಲೇಮಾಡ ಡಿ. ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಖಾಯಂ ಆಹ್ವಾನಿತ ನಿರ್ದೇಶಕರಾದ ಚೆಪ್ಪುಡೀರ ಬಿ. ಕಿಟ್ಟು ಅಯ್ಯಪ್ಪ, ನಿರ್ದೇಶಕರು ಗಳಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಕಾವ್ಯ ಕಾವೇರಮ್ಮ, ಚೊಟ್ಟೆಕಾಳಪ್ಪಂಡ ಆಶಾ ಪ್ರಕಾಶ್ ಹಾಜರಿದ್ದರು.