*ಗೋಣಿಕೊಪ್ಪ, ನ. ೨೨: ಸರ್ವದೈವತಾ ಇನ್ಸಿ÷್ಟಟ್ಯೂಟ್, ಗೋಣಿಕೊಪ್ಪ ರೋಟರಿ ಕ್ಲಬ್, ಸರ್ವ ದೈವತಾ ಇಂಟ್ರೇಕ್ಟ್ ಕ್ಲಬ್ ಸಹಯೋಗ ದಲ್ಲಿ ಜಿಲ್ಲಾ ಮಟ್ಟದ ಚೆಸ್ ಟೂರ್ನಿಯನ್ನು ತಾ. ೨೬ ರಂದು ಅರುವತ್ತೊಕ್ಲು ಸರ್ವದೈವತಾ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಸರ್ವದೈವತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಪೊನ್ನಿಮಾಡ ಪ್ರದೀಪ್ ತಿಳಿಸಿದ್ದಾರೆ.
೫ ರಿಂದ ೭ನೇ ತರಗತಿ, ೮-೧೦, ಪದವಿಪೂರ್ವ ವಿಭಾಗಗಳ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದೆ. ವಿಜೇತರಿಗೆ ನಗದು, ಟ್ರೋಪಿ ನೀಡಲಾಗುವುದು. ಜಿಲ್ಲೆಯಲ್ಲಿ ಚೆಸ್ ಆಸಕ್ತಿ ಹೆಚ್ಚಿದ್ದು, ಪೂರಕವಾಗಿ ಟೂರ್ನಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ೯೯೦೦೯೨೭೦೯೫, ೮೮೬೧೪೧೧೮೭೫ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಇದ್ದರು.