ಜಾಗತಿಕ ಕೊಡವ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ

ಮಡಿಕೇರಿ, ನ. ೨೩: ಪ್ರಪಂಚದ ವಿವಿಧೆಡೆ ಚದುಗಿದಂತಿರುವ ಕೊಡವ ಜನಾಂಗದವರನ್ನು ಒಂದೇ ವೇದಿಕೆಯಡಿ ತಂದು ಪ್ರಸ್ತುತದ ವಾಸ್ತವದ ಚರ್ಚೆ ಮುಂದಿನ ಹೆಜ್ಜೆಗಳ ಬಗ್ಗೆ ತೀರ್ಮಾನದ ಚಿಂತನೆಯೊAದಿಗೆ ಡಿಸೆಂಬರ್ ೨೯-೩೦ ರಂದು ಮಡಿಕೇರಿಯಲ್ಲಿ ಜಾಗತಿಕ ಕೊಡವ ಸಮ್ಮೇಳನ ಗ್ಲೋಬಲ್ ಕೊಡವ ಸಮ್ಮಿಟ್ ಆಯೋಜಿಸಲಾಗಿದೆ. ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಸಂಘಟನೆ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಕಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿವೆ. ಕಾರ್ಯಕ್ರಮದ ಯಶಸ್ವಿ ಆಚರಣೆಗೆ ಸಂಘಟನೆ ಅಗತ್ಯ ಸಿದ್ಧತೆ ನಡೆಸುತ್ತಿದೆ ಎಂದು ಟ್ರಸ್ಟ್ ಪ್ರಮುಖರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಶಾಂತೆಯAಡ ನಿರನ್ ನಾಚಪ್ಪ, ೨ ದಿನಗಳ ಕಾಲ ಮಡಿಕೇರಿ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಈ ಸಂಬAಧ ವಿಶ್ವದ ವಿವಿಧೆಡೆ ಇರುವ ಕೊಡವರನ್ನು, ಕೊಡವ ಕುಟುಂಬ ಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಿಂದ ಜನಾಂಗ ಒಂದೆ ವೇದಿಕೆಯಲ್ಲಿ ಸೇರುವಂತಾಗಿದೆ. ಕೊಡವರ ಪ್ರಸ್ತುತ ಸ್ಥಿತಿಗತಿ, ಮುಂದಿನ ನಡೆಯ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಟ್ರಸ್ಟ್ನಿಂದ ೨೦೧೭ ರಿಂದ ೧೦೧೬ ಕೊಡವ ಕುಟುಂಬ, ೨೫ ನಾಡಿನ ತಕ್ಕಮುಖ್ಯಸ್ಥರನ್ನು ಸಂಪರ್ಕಿಸಿ ಜನಾಂಗದ ಐತಿಹ್ಯದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಪಟ್ರಪಂಡ ಪಂಥ್ ಮೊಣ್ಣಪ್ಪ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ವ್ಯಾಪಾರ, ಶಿಕ್ಷಣ, ಕ್ರೀಡಾ ಕನ್‌ಕ್ಲೆವ್ ಆಯೋಜಿಸಲಾಗಿದೆ. ಕೊಡವರ ಸರ್ವಾಂಗೀಣ ಅಭಿವೃದ್ಧಿಯ ವಿಚಾರಗಳಿಗೆ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗುವುದು. ಸಮಕಾಲೀನ ಸಮಸ್ಯೆ ಅದಕ್ಕೆ ಪರಿಹಾರ, ಸಂಸ್ಕೃತಿ ಉಳಿಸಿ, ಬೆಳೆಸುವ ಕುರಿತು ಚರ್ಚೆಗಳು, ಕೊಡಗಿನ ವಸ್ತುಗಳಿಗೆ ಜಾಗತಿಕ ಮನ್ನಣೆ ಸಿಗುವ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಣೆ, ಶೈಕ್ಷಣಿಕ ಉತ್ತೇಜನದ ಕುರಿತು ಸಂವಾದಗಳು ನಡೆಯಲಿವೆ ಎಂದು ತಿಳಿಸಿದರು.

ಪಾಲೇಂಗಡ ಅಮಿತ್ ಭೀಮಯ್ಯ ಮಾತನಾಡಿ, ಕೊಡಗಿನ ಆಚರಣೆ ಮಹತ್ವ, ಯುವಪೀಳಿಗೆಗೆ ಅರಿವು ಮೂಡಿಸಲು ವೈವಿಧ್ಯಮಯ ಕಾರ್ಯಕ್ರಮ, ಮಾದರಿ ಗ್ರಾಮದ ಮೂಲಕ ಕೊಡವ ಐನ್‌ಮನೆ, ಮಂದ್, ಪತ್ತಾಯ, ಕೈಮಡ ಇತ್ಯಾದಿಗಳ ವೀಕ್ಷಣೆಗೆ ಅವಕಾಶ, ಕೊಡವ ಕಲಾಕೃತಿ, ಉಡುಗೆ ತೊಡುಗೆ, ಐತಿಹಾಸಿಕ ವಸ್ತುಗಳ ಪ್ರದರ್ಶನ, ಕೊಡವ ಭಾಷೆ, ಲಿಪಿ ಉತ್ತೇಜನ ಸಂಬAಧ ಪುಸ್ತಕ ಮೇಳ, ಅಧಿವೇಶನ, ಆಹಾರ ಮೇಳ, ಸಮುದಾಯದ ಸಂಪರ್ಕ ಸುಗಮಗೊಳಿಸಲು ಕಾರ್ಯತಂತ್ರ, ಕರಕುಶಲ ಮೇಳ, ವ್ಯಾಪಾರ

(ಮೊದಲ ಪುಟದಿಂದ) ಎಕ್ಸ್ಪೋ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದರಿಂದ ಜನಾಂಗ ಒಗ್ಗೂಡಲು ವೇದಿಕೆ ಸೃಷ್ಟಿಸಿದಂತಾಗಿದೆ. ಸುಮಾರು ೧೫ ರಿಂದ ೨೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಬೊಳ್ಳೇರ ಪೃಥ್ವಿ ಪೂಣಚ್ಚ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಊರು, ಕೇರಿ, ನಾಡು, ಕುಟುಂಬಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ಹಂತಗಳಲ್ಲಿ ಬಾಳೋಪಾಟ್, ಬಟ್ಟೆ ಪಾಟ್, ತಾಲಿ ಪಾಟ್, ಕೋಲಾಟ್, ಕತ್ತಿಯಾಟ್, ಸಂಬAಧ ಪೆರಾಜೆ, ಉಮ್ಮತಾಟ್, ಬೊಳಕಾಟ್, ವಾಲಗತಾಟ್ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಮುಖ ರಾದ ಅಚ್ಚಾಂಡಿರ ಕುಶಾಲಪ್ಪ, ಓಡಿಯಂಡ ನವೀನ್ ತಿಮ್ಮಯ್ಯ ಹಾಜರಿದ್ದರು.