ಸೋಮವಾರಪೇಟೆ, ನ. ೨೩: ಜಿಲ್ಲೆಯಲ್ಲಿ ಸೀಮೆಎಣ್ಣೆ ವಿತರಣೆ ಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೇ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.
ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ ಅವರ ಅಧ್ಯಕ್ಷತೆಯಲ್ಲಿ ನವ ದುರ್ಗಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗಬೇಕಾಗಿರುವ ಸೀಮೆಎಣ್ಣೆ ಅವಶ್ಯಕತೆಯ ಬಗ್ಗೆ ಅಧಿಕಾರಿಗೆ ಮನವರಿಕೆ ಮಾಡಿದರು.
ಸರ್ಕಾರ ಕೊಡುವ ಕಡಿಮೆ ಕಮಿಷನ್‌ನಿಂದ ಟೆಂಡರ್ ತೆಗೆದು ಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇಲಾಖೆಯ ಮೂಲಕವೇ ಸೀಮೆಎಣ್ಣೆ ವಿತರಣೆಯಾಗುವಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಕೂಗೂರು ನಾಗರಾಜ್, ವೀರಭದ್ರಪ್ಪ, ವಿ.ಎನ್. ದೇವರಾಜ್, ಜಿ.ಪಿ.¸ ÀÄನಿಲ್, ಫ್ರಾನ್ಸಿಸ್ ಡಿಸೋಜ ಒತ್ತಾಯಿಸಿದರು.
ಸರ್ಕಾರದಿಂದ ಸೀಮೆಎಣ್ಣೆ ಹಂಚಿಕೆಗೆ ಅನುಮತಿ ಇದೆ. ಆದರೆ, ಟೆಂಡರ್ ಪಡೆಯುವವರು ಇಲ್ಲದಿರು ವುದರಿಂದ ವಿತರಣೆಯಾಗುತ್ತಿಲ್ಲ. ಬೇಡಿಕೆ ಬಗ್ಗೆ ಮೇಲಾಧಿಕಾರಿ ಗಳೊಂದಿಗೆ ಚರ್ಚಿಸಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸ್ಪಷ್ಟನೆ ನೀಡಿದಾಗ, ರೈತರು ಆಕ್ರೋಶ ಗೊಂಡರು. ಕೂಡಲೇ ಸೀಮೆಎಣ್ಣೆ ವಿತರಣೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಎರಡು ದಿನ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇದ್ದು, ಸಾರ್ವಜನಿಕರ ಕೆಲಸ ಮಾಡಬೇಕು ಎಂದು ಗ್ರಾಮ ಆಡಳಿತಾಧಿಕಾರಿ ಸಂತೋಷ್ ಅವರಿಗೆ ಸಭೆ ಸೂಚಿಸಿತು. ಅಧಿಕಾರಿಗಳು ಸರ್ಕಾರಿ ಸಿಮ್ ಉಪಯೋಗಿಸಬೇಕು. ರೈತರ ಕರೆಗಳನ್ನು ಸ್ವೀಕಾರ ಮಾಡಬೇಕು ಎಂದು ಹೇಳಿದರು.
ಸೋಮವಾರ ಮತ್ತು ಶುಕ್ರವಾರ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಭ್ಯವಿರುತ್ತಾರೆ ಎಂದು ಅಧಿಕಾರಿ ಭರವಸೆ ನೀಡಿದರು.
ಬಡ ರೈತರ ದುರಸ್ತಿ ಫೈಲ್‌ಗಳು ವರ್ಷಾನುಗಟ್ಟಲೆ ಕಚೇರಿಯಲ್ಲೆ ಧೂಳು ತಿನ್ನುತ್ತಿವೆ. ಕೂಡಲೇ ವಿಲೇವಾರಿ ಮಾಡಬೇಕು. ದುರಸ್ತಿಗೆ ಅರ್ಜಿ ಸಲ್ಲಿಸಿದ ಮೇಲೆ ಪೂರಕ ದಾಖಲೆ ಒದಗಿಸಲು ಅರ್ಜಿದಾರರಿಗೆ ನೋಟೀಸ್ ಮಾಡಿ, ಕಿರುಕುಳ ನೀಡಲಾಗುತ್ತಿದೆ. ಎಲ್ಲಾ ದಾಖಲೆಗಳು ಕಂದಾಯ ಇಲಾಖೆಯಲ್ಲೇ ಸಿಗುವುದರಿಂದ, ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ, ಅರ್ಜಿದಾರರನ್ನು ಮಡಿಕೇರಿ, ಸೋಮವಾರಪೇಟೆಗೆ ಅಲೆಸುವುದನ್ನು ನಿಲ್ಲಿಸಬೇಕು. ರೈತರ ತಾಳ್ಮೆಯನ್ನು ‘ವೀಕ್‌ನೆಸ್’ ಎಂದು ಇಲಾಖೆಯ ಸಿಬ್ಬಂದಿಗಳು ತಿಳಿದಿದ್ದಾರೆ. ರೈತರಿಗೆ ಅನ್ಯಾಯ ಮಾಡಿದರೆ, ಅದರ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ ಎಂದು ನಾಗರಾಜ್, ಸುಮಂತ್, ವೀರಭದ್ರಪ್ಪ, ಪೃಥ್ವಿ, ಚಿನ್ನಪ್ಪ, ಶಾಂತಮಲ್ಲಪ್ಪ ಎಚ್ಚರಿಸಿದರು.
ಹಿರಿಕರ, ಕೂಗೂರು, ಚಿಕ್ಕಾರ ವ್ಯಾಪ್ತಿಯಲ್ಲಿ ಕಾಡಾನೆಗಳು, ಕಾಡು ಕೋಣಗಳ ಹಾವಳಿ ಮಿತಿಮೀರಿದೆ. ಕಾಫಿ ಕೊಯ್ಲಿಗೆ ಬಂದಿದೆ. ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯ ಪಡುತ್ತಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಹೆಚ್.ಈ. ರಮೇಶ್, ಫ್ರಾನ್ಸಿಸ್ ಡಿಸೋಜ ಹೇಳಿದರು. ಹಿರಿಕರ ಗ್ರಾಮ ಕಾಡಂಚಿನಲ್ಲಿ ಸೋಲಾರ್ ತಂತಿಬೇಲಿ ಕೆಲಸವಾಗುತ್ತಿದೆ. ನಂತರ ಹತೋಟಿಗೆ ಬರುತ್ತದೆ ಎಂದು ಡಿಆರ್‌ಎಫ್‌ಒ ಸೂರ್ಯ ಭರವಸೆ ನೀಡಿದರು.
ಗ್ರಾಮಸಭೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಸಭೆಗೆ ಶಾಸಕರನ್ನು ಗೌರವದಿಂದ ಆಮಂತ್ರಿಸಿಲ್ಲ ಎಂದು ವಿ.ಎನ್. ನಾಗರಾಜ್, ಪಿಡಿಓ ಲಿಖಿತಾ ಹಾಗೂ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಗ್ರಾಮಸಭೆಯಲ್ಲಿ ಹಾಜರಿದ್ದರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಸಭೆ ಮಾಹಿತಿಯನ್ನು ಮನೆ ಮನೆಗೆ ತಲುಪಿಸಬೇಕು ಎಂದು ಸಭೆ ಸೂಚಿಸಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ವೆಂಕಟೇಶ್, ಮಂಜುನಾಥ್, ಪ್ರಸನ್ನ, ಗಣೇಶ್, ರೋಹಿಣಿ, ಸುಮಾ, ಮಲ್ಲಿಕಾ, ನೋಡೆಲ್ ಅಧಿಕಾರಿ ಸತೀಶ್ ಇದ್ದರು.