ಚೆಯ್ಯAಡಾಣೆ, ನ. ೨೨: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ತಾ. ೨೩ರಿಂದ ತಾ.೨೫ ರವರೆಗೆ ಮೊದಲ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ ಆರಂಭವಾಗಲಿದೆ. ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ಪಂದ್ಯಾಟ ನಡೆಯಲಿದೆ.
ಕಡಿಯತ್ ನಾಡಿಗೆ ಒಳಪಟ್ಟ ಅರಪಟ್ಟು, ನರಿಯಂದಡ, ಬಾವಲಿ, ಚೇಲಾವರ, ಕೈಕಾಡು, ಬ್ಲೂ ಸ್ಟಾರ್ ಕರಡ, ಕಿರುಂದಾಡು, ಕರಡ ಎಂವೈಸಿ, ಕೊಕೇರಿ, ಮಹಾದೇವ ಸ್ಪೋಟ್ಸ್ ಕ್ಲಬ್ ಬಲಮುರಿ, ಪಾಲಂಗಾಲ ತಂಡಗಳು ಭಾಗವಹಿಸಲಿದ್ದು, ಉದ್ಘಾಟನಾ ಪಂದ್ಯಾಟವನ್ನು ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ ಉದ್ಘಾಟಿಸಲಿದ್ದಾರೆ.