ಮಡಿಕೇರಿ, ನ. ೨೦: ವಿಶ್ವೋತ್ತರ ಉಲಮಾ ಒಕ್ಕೂಟವಾದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೊಡಗು ಜಿಲ್ಲಾ ಸಮಿತಿಯಿಂದ ತಾ. ೨೧ರಂದು (ಇಂದು) ಸುಂಟಿಕೊಪ್ಪದ ಜಾಮಿಅಃ ಜೂನಿಯರ್ ಕಾಲೇಜು ಸಭಾಂಗಣ ದಲ್ಲಿ ಸಮಸ್ತ ಕೊಡಗು ಜಿಲ್ಲಾ ಉಲಮಾ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಸದಸ್ಯ ಎಂ. ತಮ್ಲೀಖ್ ದಾರಿಮಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ ೮.೩೦ಕ್ಕೆ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್ ನೇತೃತ್ವ ದಲ್ಲಿ ಕಂಬಿಬಾಣೆಯ ವಲಿಯುಲ್ಲಾಹಿ ಕಾಕು ಉಪ್ಪಾಪ ದರ್ಗಾ ಝಿಯಾರಿತಿ ನೊಂದಿಗೆ ಸಮ್ಮೇಳನವು ಚಾಲನೆಗೊಳ್ಳ ಲಿದೆ. ಎಸ್.ಕೆ.ಜೆ.ಯ ಕೊಡಗು ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಪಿ. ಅಬೂಬ ಕ್ಕರ್ ಮುಸ್ಲಿಯಾರ್ ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಮತ್ತು ಎಸ್.ಕೆ. ಜೆ.ಯ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಫೈಝಿ ಉಸ್ತಾದ್ ಅವರ ಪ್ರಾರ್ಥನೆಯೊಂದಿಗೆ, ಅಧ್ಯಕ್ಷತೆಯಲ್ಲಿ ಸಮ್ಮೇಳನ ಆರಂಭಗೊಳ್ಳಲಿದೆ. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಮೂಸ ಮುಸ್ಲಿಯಾರ್ ವಯನಾಡು ಕಾರ್ಯಕ್ರಮವನ್ನು ಉದ್ಘಾ ಟಿಸಲಿದ್ದಾರೆ. ಎಸ್.ಕೆ.ಜೆ.ಎಂ.ಸಿ.ಸಿ. ಕಾರ್ಯದರ್ಶಿ ಅಬ್ದರ‍್ರಹ್ಮಾನ್ ಮುಸ್ಲಿಯಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಂತರ ನಡೆಯುವ ತರಬೇತಿ ಶಿಬಿರದಲ್ಲಿ ಇಸ್ತಿಖಾಮ ನಾಯಕರಾದ ಎಂ.ಟಿ. ಅಬೂಬಕ್ಕರ್ ದಾರಿಮಿ ತಪಸ್ಸುಲ್ ಇಸ್ತಿಗಾಸ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕೇರಳದ ವಾಗ್ಮಿಗಳಾದ ಜೆಸೀಲ್ ಕಮಾಲಿ ಫೈಝಿ ಅಹ್ಲು ಸುನ್ನತ್ ವಲ್ ಜಮಾಅಃ ಎಂಬ ವಿಷಯ ಮಂಡಿಸಲಿದ್ದಾರೆ. ಅಬ್ದುಲ್ ಸಲಾಂ ಫೈಝಿ ಎಡಪಾಲ ತಬ್ಲೀಗ್ ಜಮಾಅತ್ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

ಜಿಲ್ಲೆಯ ವಿದ್ವಾಂಸರುಗಳಾದ ಮೊಯಿದು ಫೈಝಿ ಇಸ್ಮಾಯಿಲ್ ಉಸ್ತಾದ್, ಉಮ್ಮರ್ ಫೈಝಿಘನಿ ಉಸ್ತಾದ್ ಜಾಮಿಅಃ ಜೂನಿಯರ್ ಕಾಲೇಜು ಪ್ರಾಂಶುಪಾಲ ಝೈನುದ್ದೀನ್ ಫೈಝಿ ಸೇರಿದಂತೆ ಜಿಲ್ಲೆಯ ಹಲವಾರು ಉಲಮಾ ಉಮರಾ ನೇತಾರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಮ್ಲೀಖ್ ದಾರಿಮಿ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಎಂ. ಅಬ್ದುಲ್ಲ ಫೈಝಿ, ಪ್ರಧಾನ ಕಾರ್ಯದರ್ಶಿ ಎ.ಸಿ. ಉಸ್ಮಾನ್ ಫೈಝಿ, ಸದಸ್ಯರಾದ ಪಿ.ಬಿ. ಇಸ್ಮಾಯಿಲ್ ಉಸ್ತಾದ್, ಅಬ್ದುಲ್ ಘನಿ ಉಸ್ತಾದ್, ಪಿ. ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.