ವೀರಾಜಪೇಟೆ, ನ. ೨೦ : ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಶ್ರಮದಾನ ಕಾರ್ಯಕ್ರಮದ ಮೂಲಕ ಸ್ವಚ್ಛಗೊಳಿಸಲಾಯಿತು. ಕಾಲೇಜಿನ ಸುಮಾರು ೧೩೫ ಸ್ವಯಂ ಸೇವಕ-ಸೇವಕಿಯರನ್ನೊಳಗೊಂಡ ತಂಡವು ಆಸ್ಪತ್ರೆಯ ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಅಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಕೆ.ಸಿ. ಅವರು ವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹೇಮಪ್ರಿಯ, ಹಿರಿಯ ಶ್ರೇಣಿ ಶುಶ್ರೂಶಕಿಯವರಾದ ಜುಬೇದ, ಮೀನಾಕ್ಷಿ ಮತ್ತು ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ವೇಣುಗೋಪಾಲ್ ಹೆಚ್.ಎಸ್., ಎನ್.ಎಸ್.ಎಸ್. ನಾಯಕ ಸಾಗರ್, ನಾಯಕಿ ಖುಷಿ ಹಾಗೂ ಸ್ವಯಂ ಸೇವಕ-ಸೇವಕಿಯರು ಹಾಜರಿದ್ದರು.