ಕಣಿವೆ, ನ. ೨೦ : ಸಹಕಾರ ಸಂಸ್ಥೆಗಳ ಶಿಕ್ಷಣ ಮತ್ತು ತರಬೇತಿ ಯನ್ನು ಪುನರುಜ್ಜೀವನ ಗೊಳಿಸಲು ಕೇಂದ್ರ ಸರ್ಕಾರ ವಿಶ್ವದ ಅತಿ ದೊಡ್ಡ ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಒತ್ತು ನೀಡುತ್ತಿದೆ. ಸಹಕಾರ ಸಂಘಗಳು ಕೇವಲ ಆರ್ಥಿಕ ಘಟಕಗಳಾಗಿರದೇ ನಿರಂತರ ಕಲಿಕೆ, ತರಬೇತಿ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಕೆ. ಮನು ಮುತ್ತಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸಹಕಾರ ಶಿಕ್ಷಣ ಮತ್ತು ತರಬೇತಿಯ ತತ್ವವು ದೇಶದ ಸಹಕಾರ ಚಳುವಳಿಯ ಕ್ರಿಯಾತ್ಮಕ ಸ್ವರೂಪವನ್ನು ನಿಭಾಯಿಸಲು ಎಲ್ಲಾ ರೀತಿಯಲ್ಲೂ ಎಲ್ಲಾ ಸಹಕಾರಿಗಳನ್ನು ಸಬಲೀಕರಣ ಗೊಳಿಸುವುದಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಲವು ಯೋಜನೆಗಳು

(ಮೊದಲ ಪುಟದಿಂದ) ಶಿಕ್ಷಣ, ತರಬೇತಿ, ಸಮಾಲೋಚನೆ, ಸಂಶೋಧನೆ ಹಾಗೂ ಅಭಿವೃದ್ಧಿಯ ಕಾರ್ಯವೈಖರಿಯನ್ನು ವಿವಿ ಮೌಲ್ಯಮಾಪನಗೊಳಿಸಲಿದೆ. ಸಹಕಾರ ಸಂಸ್ಥೆಗಳಲ್ಲಿ ರಾಜಕಾರಣ ನುಸುಳದಂತೆ ಎಚ್ಚರ ವಹಿಸುವ ಅಗತ್ಯವಿದೆ ಹೇಳಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ವ್ಯವಸಾಯ ಸಹಕಾರ ಬ್ಯಾಂಕಿನ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಪ್ರಾಸ್ತಾವಿಕ ನುಡಿಗಳಾಡಿ, ಸಹಕಾರ ಸಂಘಗಳ ಆರ್ಥಿಕ ವಹಿವಾಟಿನ ಆದಾಯದ ಮೇಲೆ ವಿಧಿಸುವ ಜಿಎಸ್ ಟಿ ಯನ್ನು ಸರ್ಕಾರ ಹಿಂಪಡೆಯಬೇಕಾಗಿದೆ. ಜನಸಾಮಾನ್ಯರಿಂದ ಶೇರು ಬಂಡವಾಳ ಸಂಗ್ರಹಿಸಿ ಕಟ್ಟಿ ಬೆಳೆಸುವ ಸಹಕಾರ ಸಂಘ ಸಂಸ್ಥೆಗಳಿAದ ತೆರಿಗೆ ವಸೂಲಾತಿ ಕ್ರಮ ಅವೈಜ್ಞಾನಿಕ ಕ್ರಮವಾಗಿದೆ ಎಂದು ಶರವಣಕುಮಾರ್ ವಿರೋಧ ವ್ಯಕ್ತಪಡಿಸಿದರು. ಸಹಕಾರ ಸಂಘ ಸಂಸ್ಥೆಗಳು ಅತ್ಯುತ್ತಮವಾಗಿ ಹಣಕಾಸು ವಹಿವಾಟು ನಡೆಸುತ್ತಿರುವ ಕಾರಣ ಸಂಘಗಳಲ್ಲಿ ಆರ್ಥಿಕ ಶಿಸ್ತು ತರಲು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಸಹಕಾರ ಸಂಸ್ಥೆಗಳ ವ್ಯವಹಾರ ಜ್ಞಾನವುಳ್ಳ ಪದವಿ ಕೋರ್ಸ್ ಆರಂಭಿಸುವAತಾಗಬೇಕು ಎಂದರು.

ಕೇವಲ ಪಿಯುಸಿ, ಜಿಡಿಸಿಗಿಂತ ಆಧುನಿಕತೆಯ ಕಾಲಘಟ್ಟಕ್ಕೆ ಹೊಂದಿಕೊAಡAತೆ ಸ್ನಾತಕೋತ್ತರ ಪದವೀಧರರ ನೇಮಕವಾದರೆ ಸಹಕಾರ ಸಂಘಗಳ ವ್ಯವಹಾರ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಶರವಣಕುಮಾರ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜನಸಾಮಾನ್ಯರಿಗೆ ಹಾಗೂ ವೃತ್ತಿನಿರತರಿಗೆ ಸಹಕಾರ ಸಂಘಗಳು ಶೀಘ್ರಗತಿಯಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ವಿಶ್ವಾಸ ಗಳಿಸಿವೆ. ಕುಶಾಲನಗರದ ಹಿರಿಯ ಸಹಕಾರಿ ಟಿ.ಆರ್. ಶರವಣಕುಮಾರ್ ಅವರ ಯೋಜನೆಗಳು ಹಾಗೂ ಯೋಚನೆಗಳು ಜಿಲ್ಲೆಯ ಸಹಕಾರ ರಂಗಕ್ಕೆ ಮಾದರಿಯಾಗಿವೆ ಎಂದರು.

ಸಹಕಾರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಅಣೆಕಟ್ಟುಗಳು ರೈತರ ಪಾಲಿನ ದೇವಾಲಯದಂತಿದ್ದು ಭಾರತ ದೇಶ ಆಹಾರೋತ್ಪತ್ತಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಸಹಕಾರ ಸಂಸ್ಥೆಗಳು ರೈತರ ಅಗತ್ಯಗಳನ್ನು ಕಾಲ ಕಾಲಕ್ಕೆ ಈಡೇರಿಸುತ್ತಿರುವುದರಿಂದ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸುವ ಅಗತ್ಯಗಳ ಕುರಿತು ಮಾತನಾಡಿದರು.

ಸಹಕಾರ ಸಪ್ತಾಹದ ಕುರಿತು ಮಡಿಕೇರಿಯ ಸಹಕಾರ ಸಂಘಗಳ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಆರ್.ಎಸ್.ರೇಣುಕಾ ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕನ್ನಂಡ ಸಂಪತ್, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ಬಿ. ಯತೀಶ್, ಪಿ.ಸಿ. ಅಚ್ಚಯ್ಯ, ಕುಶಾಲನಗರದ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರಾದ ಎಂ.ಎನ್. ಕುಮಾರಪ್ಪ, ಎಂ.ಕೆ. ದಿನೇಶ್, ಸಲೀನ ಡಿ ಕುನ್ನ, ಕೆ.ಎನ್. ಅಶೋಕ್, ಶಾಂತ ಶ್ರೀಪತಿ, ಪಿ.ಕೆ. ಜಗದೀಶ್, ಎ.ಕೆ. ವೇಣು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎ.ಇ. ಮೋಹನ್ ಇದ್ದರು.

ಇದೇ ಸಂದರ್ಭ ಸಹಕಾರ ಸಂಸ್ಥೆಗಳ ಸಾಧಕರಾದ ಎಂ.ಎನ್. ಕುಮಾರಪ್ಪ, ಎಂ.ಡಿ. ರಂಗಸ್ವಾಮಿ, ಶಾರದಾ ವಸಂತಕುಮಾರ್, ಎಸ್.ಎಲ್. ಶ್ರೀಪತಿ, ದೇಚಮ್ಮ, ಕಲಾವಿದೆ ಪ್ರಗತಿ ಬಡಿಗೇರ್, ಕ್ರೀಡಾಪಟು ಎಸ್. ಪುನೀತ್ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಕಾರ್ಯಕ್ರಮಕ್ಕೂ ಮುನ್ನಾ ಕುಶಾಲನಗರದ ಗಣಪತಿ ದೇವಾಲಯದಿಂದ ಕುಶಾಲನಗರದ ವಿವಿಧ ಹನ್ನೆರಡು ಸಹಕಾರ ಸಂಘಗಳ ಸಹಕಾರಿಗಳಿಂದ ಸಪ್ತಾಹದ ಅಂಗವಾಗಿ ಮೆರವಣಿಗೆ ನಡೆಯಿತು.

ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸ್ವಾಗತಿಸಿದರು.