ಪೊನ್ನಂಪೇಟೆ. ನ. ೨೦: ಗೋಣಿಕೊಪ್ಪಲು ಕಾವೇರಿ ಕಾಲೇ ಜಿನ ಪೋಷಕರ ಮತ್ತು ಅಧ್ಯಾಪಕರ ಸಭೆಯು ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೋಣಿಕೊಪ್ಪಲು ಕಾವೇರಿ ಎಜು ಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ.ಇಟ್ಟಿರ ಕೆ.ಬಿದ್ದಪ್ಪ ಮಾತನಾಡಿ, ಪೋಷಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು. ಮಕ್ಕಳು ಪೋಷಕರನ್ನು ಅನುಸರಿಸುವುದರಿಂದ, ಪೋಷಕರು ಮಕ್ಕಳೆದುರು ಯಾವುದೇ ರೀತಿಯ ಕೆಟ್ಟನಡವಳಿಕೆಯನ್ನು ತೋರ್ಪಡಿಸಿ ಕೊಳ್ಳಬಾರದು. ಮಕ್ಕಳಿಗೆ ಸಂಸ್ಕಾರ ವನ್ನು ಕಲಿಸುವ ಬಹುಮುಖ್ಯ ಜವಾಬ್ದಾರಿ ಹೆತ್ತವರ ಮೇಲಿದೆ.

ಸಾಧ್ಯವಾದರೆ ತಿಂಗಳಿಗೊಮ್ಮೆ ಕಾಲೇಜಿಗೆ ಬಂದು ಉಪನ್ಯಾಸಕ ರನ್ನು ಭೇಟಿ ಮಾಡಿ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ತಿಳಿದು ಕೊಂಡು, ತಮ್ಮ ಮಕ್ಕಳನ್ನು ಸುಸಂಸ್ಕೃ ತರನ್ನಾಗಿ ಮಾಡುವಲ್ಲಿ ಶಿಕ್ಷಕರೊಂ ದಿಗೆ ಪೋಷಕರು ಕೈಜೋಡಿಸಬೇಕು ಎಂದರು.

ಕಾವೇರಿ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯ ದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ, ಕೆಲವು ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ದಿನಚರಿಯ ಬಗ್ಗೆ ಗಮನವಿಡಬೇಕು ಎಂದು ತಿಳಿಸಿದರು.

ಈ ಸಂದರ್ಭ ಪೋಷಕರ ಮತ್ತು ಅಧ್ಯಾಪಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಎಂ.ಅನಿತ, ಜಂಟಿ ನಿರ್ದೇಶಕ ರಾಗಿ ಬಿ.ಎಂ.ವಿಜಯ್ ಮತ್ತು ಎಂ.ಬಿ.ಮೀನಾ, ಖಜಾಂಚಿಯಾಗಿ ಎಂ.ಎನ್.ಭವಾನಿ ಆಯ್ಕೆಯಾದರು.

ಪ್ರಾಂಶುಪಾಲ ಡಾ.ಎಂ.ಬಿ. ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಡಾ.ಎ.ಎಸ್. ಪೂವಮ್ಮ, ಪೋಷಕರ ಮತ್ತು ಅಧ್ಯಾಪಕರ ಸಂಘದ ಸಂಚಾಲಕ ರಾದ ಕೆ.ಟಿ.ಸೀತಮ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಅಜಯ್ ಕುಮಾರ್, ಐಕ್ಯೂಎಸಿ ಸಂಚಾ ಲಕಿ ಡಾ. ನಯನ ತಮ್ಮಯ್ಯ, ಉಪ ನ್ಯಾಸಕರು ಹಾಗೂ ಪೋಷಕರು ಇದ್ದರು.