ಸುಂಟಿಕೊಪ್ಪ, ನ. ೨೦: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ೧ ವರ್ಷದ ಅವಧಿಯೊಳಗೆ ೩ ಮಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆಯಾಗಿದ್ದು, ಅಧಿಕಾರ ವಹಿಸಿಕೊಂಡ ೪ ದಿನದಲ್ಲೇ ನೂತನ ಪಿಡಿಓ ವರ್ಗಾವಣೆಯಾಗಿದ್ದರಿಂದ ಈಗ ಖಾಯಂ ಪಿಡಿಓ ಇಲ್ಲದೆ ಪಂಚಾಯಿತಿ ಅಭಿವೃದ್ಧಿ ಕಾರ್ಯ ಕುಂಠಿತಗೊAಡು ಸಾರ್ವಜನಿಕರು ಪಂಚಾಯಿತಿಯಿAದ ನೀಡುವ ದಾಖಲಾತಿಗಳಿಗಾಗಿ ಅಲೆಯುವಂತಾಗಿದೆ.
ಮಾದಾಪುರ ಗ್ರಾಮ ಪಂಚಾಯಿತಿ ಸೋಮವಾರಪೇಟೆ ಮಡಿಕೇರಿ ರಾಜ್ಯ ಹೆದ್ದಾರಿ ಮಧ್ಯಭಾಗದಲ್ಲಿದ್ದು, ಬೆಳೆಯುತಿರುವ ಗ್ರಾಮ ಪಂಚಾಯಿತಿಯಲ್ಲಿ ಒಂದಾಗಿದೆ. ೨೦೧೮ರಲ್ಲಿ ಘಟಿಸಿದ ಮೇಘಾಸ್ಪೋಟ, ಜಲಪ್ರಳಯದಿಂದ ಕೊಡಗಿನ ಹಲವು ಮಂದಿ ಮನೆ ಕಳೆದುಕೊಂಡಿದ್ದು, ಮಾದಾಪುರ ಪಂಚಾಯಿತಿಯ ಜಂಬೂರು ಗ್ರಾಮದಲ್ಲಿ ಸಂತ್ರಸ್ತರಿಗೆ ೪೧೧ ಮನೆಗಳನ್ನು ಸರಕಾರ ನಿರ್ಮಿಸಿಕೊಟ್ಟಿದೆ. ಇದರಿಂದ ಜನಸಂಖ್ಯೆ ಹೆಚ್ಚಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ ಜಂಬೂರು
(ಮೊದಲ ಪುಟದಿಂದ) ಗ್ರಾಮದಲ್ಲಿ ಬರದ ಛಾಯೆಯಿಂದ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ. ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಈ ಸಾಲಿನಲ್ಲಿ ಈಗಾಗಲೇ ೪ ಮಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದಾರೆ. ಆಗಾಗ್ಗೆ ಪಿಡಿಓಗಳ ವರ್ಗಾವಣೆಯಿಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ತೊಡಕಾಗಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಪಿ.ಡಿ. ಅಂತೋಣಿ(ತAಗಚ್ಚ) ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ೮ ತಿಂಗಳಿನಿAದ ಮಾದಾಪುರ ಗ್ರಾ.ಪಂ.ಪಿಡಿಓ ಆಗಿದ್ದ ಸುಮೇಶ ಅವರನ್ನು ಜಿಲ್ಲಾಡಳಿತ ಗುಡ್ಡೆಹೊಸೂರು ಗ್ರಾ.ಪಂ.ಗೆ ಪಿಡಿಓ ಆಗಿ ವರ್ಗಾವಣೆಗೊಳಿಸಿದ್ದಾರೆ. ಅವರ ಬದಲಿಗೆ ಸುರೇಶ ಎಂಬವರನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿಸಿದ್ದು ಅವರು ಬಂದು ೪ ದಿನ ಕರ್ತವ್ಯ ನಿರ್ವಹಿಸಿದ ನಂತರ ಪೊನ್ನಂಪೇಟೆ ಗ್ರಾ.ಪಂ. ಪಿಡಿಓ ಆಗಿ ವರ್ಗಾಯಿಸಲಾಗಿದೆ. ನಂತರ ಪೂರ್ಣಕುಮಾರ್ ಅವರು ನೇಮಕಗೊಂಡು ಕೆಲವೆ ದಿನಗಳಲ್ಲಿ ಚೌಡ್ಲುಗೆ ವರ್ಗಾವಣೆಗೊಂಡಿದ್ದಾರೆ. ಸದ್ಯಕ್ಕೆ ಪೂರ್ಣಿಮ ಅವರು ಮಾದಾಪುರ ಹಾಗೂ ಹರದೂರು ಪಿಡಿಓ ಆಗಿ ಪ್ರಬಾರವಾಗಿ ಕರ್ತವ್ಯನಿರ್ವಹಿಸುತ್ತಿದ್ದು, ಮಾದಾಪುರದಲ್ಲಿ ೨ ದಿನಗಳು ಮಾತ್ರ ಲಭ್ಯವಿರುತ್ತಾರೆ.
ಜಂಬೂರು ದೊಡ್ಡಿಬಾಣೆ ವಿಭಾಗದಲ್ಲಿ ಕುಡಿಯುವ ನೀರಿನ ಜಲಜೀವನ್ ಯೋಜನೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಅಭಿವೃದ್ಧಿ ಅಧಿಕಾರಿ ಇಲ್ಲದೆ ಪಂಚಾಯಿತಿ ಆಡಳಿತ ಹಿನ್ನಡೆ ಯಾಗಿದೆ. ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಹೊಂದಿಕೊಳ್ಳಬೇಕಾದರೆ ಅಧಿಕಾರಿ ಇಲ್ಲದೆ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಮಾದಾಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆAದು ಗ್ರಾ.ಪಂ. ಸದಸ್ಯ ಪಿ.ಡಿ.ಅಂತೋಣಿ ತಿಳಿಸಿದ್ದಾರೆ.