ಪೊನ್ನಂಪೇಟೆ, ನ. ೧೮: ತೀವ್ರ ಕುತೂಹಲ ಕೆರಳಿಸಿದ್ದ ಪ್ರತಿಷ್ಠಿತ ಪೊನ್ನಂಪೇಟೆನಾಡು ವ್ಯವಸಾ ಯೋತ್ಪನ್ನ ಮಾರುಕಟ್ಟೆ ಹಾಗೂ ಪರಿವರ್ತನ ಸಹಕಾರ ಸಂಘದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಮುದ್ದಿಯಡ ಡಿ.ಗಣಪತಿ (ಮಂಜು) ತಂಡ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿAದ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಮತ್ತೊಮ್ಮೆ ಆಡಳಿತ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುದ್ದಿಯಡ ಡಿ.ಗಣಪತಿ ಮಂಜು (೧೬೭೨ ಮತಗಳು), ಚೋಡುಮಾಡ ಪಿ. ಶ್ಯಾಮ್, (೧೩೩೦), ಪದಾರ್ಥಿ ಎಸ್. ಮಂಜುನಾಥ್ (೧೨೪೮), ಬೋಡಂ ಗಡ ಟಿ. ಜಗದೀಶ್ (೧೨೦೩), ಮಾಚಂಗಡ ಬಿ. ಮೊಣ್ಣಪ್ಪ (೧೧೧೫), ಮೂಕಳೇರ ಬಿ. ರಮೇಶ್(೧೧೮೮), ಮಹಿಳಾ ಮೀಸಲು ಕ್ಷೇತ್ರದಿಂದ ಬೊಟ್ಟಂಗಡ ಎಸ್. ದಶಮಿ ದೇಚಮ್ಮ(೧೪೫೯), ಮೂಕಳೇರ ಪಿ.ಶಾರದ(೧೩೨೧), ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಬಿಲ್ಲವ ಎಸ್. ಚಂದ್ರಶೇಖರ್ (೧೨೬೬), ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಮುದ್ದಿಯಡ. ಎ. ಸೋಮಯ್ಯ (೧೩೧೧), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹೆಚ್. ಹೆಚ್ ತಮ್ಮಯ್ಯ (೧೩೬೯), ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹಾಲುಮತದ ಎಂ.ಡಿಕ್ಕಿ (೧೩೪೮), ಇವರುಗಳು ತಮ್ಮ ಪ್ರತಿಸ್ಪರ್ಧಿ ಗಳನ್ನು ಮಣಿಸಿ ಆಯ್ಕೆಗೊಂಡಿ ದ್ದಾರೆ. ಎ ತರಗತಿ ಸದಸ್ಯ ಸಹಕಾರ ಸಂಘದ ಸ್ಥಾನಕ್ಕೆ ಸ್ಪರ್ಧಿಸಿದ್ದ ಐನಂಡ ಕೆ. ಬೋಪಣ್ಣ ಒಟ್ಟು ೧೦ ಮತಗಳ ಪೈಕಿ ೬ ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ. ಚುನಾವಣಾ ಅಧಿಕಾರಿ ಪಿ.ಆಶಾ ಚುನಾವಣೆ ಪ್ರಕ್ರಿಯೆ ನಡೆಸಿದರು.
ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಮಾತನಾಡಿದ ಮುದ್ದಿಯಡ ಮಂಜು ಗಣಪತಿ ಎಲ್ಲಾ ಸದಸ್ಯರು ನಮ್ಮ ತಂಡದ ಮೇಲೆ ನಂಬಿಕೆ ಇಟ್ಟು ಮತ್ತೊಂದು ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಮ್ಮ ತಂಡ ಶ್ರಮಿಸಲಿದೆ ಎಂದರು.