ಮಡಿಕೇರಿ, ನ. ೧೮: ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ಅವಘಡದಿಂದ ಹಾನಿಗೀಡಾಗಿರುವ ವೀರಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಮರು ಅಳವಡಿಕೆ ಕಾರ್ಯ ವಿಳಂಬ ವಾಗುತ್ತಿರುವುದನ್ನು ಮಡಿಕೇರಿ ಕೊಡವ ಸಮಾಜ ಆಕ್ಷೇಪಿಸಿದೆ. ಈ ಕೆಲಸವನ್ನು ತ್ವರಿತವಾಗಿ ಮಾಡದಿದ್ದಲ್ಲಿ ಸಮಾಜದ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆಡಳಿತ ಮಂಡಳಿ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹಾಗೂ ಪದಾಧಿಕಾರಿಗಳು ಈ ಘಟನೆ ನಡೆದು ಇದೀಗ ಮೂರು ತಿಂಗಳೇ ಕಳೆದು ಹೋಗಿದೆ. ಆದರೆ ಇನ್ನೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಮೈಸೂರಿನ ಶಿಲ್ಪಕಲಾ ಅಕಾಡೆಮಿಯಲ್ಲಿ ಹಾನಿಗೀಡಾಗಿರುವ ಪ್ರತಿಮೆಯನ್ನು ಈಗಾಗಲೇ ಸರಿಪಡಿಸಿ ಇಡಲಾಗಿದೆ. ಆದರೆ, ಇದರ ಮರುಅಳವಡಿಕೆ ಬಗ್ಗೆ ನಿರ್ಲಕ್ಷö್ಯಧೋರಣೆ ಕಂಡು ಬರುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಜಿಲ್ಲಾಡಳಿತ ಹಾಗೂ ನಗರಸಭೆ ಈ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ ನೀಡಿತ್ತಾದರೂ ಸ್ಥಳದಲ್ಲಿ ಆರಂಭಿಕ ಕೆಲಸ ನಿರ್ವಹಿಸಿರು ವುದನ್ನು ಹೊರತುಪಡಿಸಿದರೆ ಇದೀಗ ಯಾವುದೇ ಕಾಮಗಾರಿ ನಡೆಯದೆ ಸ್ಥಗಿತಗೊಂಡಿದೆ. ದಸರಾ ಸಂದ ರ್ಭವೇ ಪ್ರತಿಮೆ ಅಳವ ಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ದಸರಾ ಕಳೆದು ತಿಂಗಳು ಮುಗಿದಿದೆ. ಸ್ಥಳದ ಸುತ್ತಲೂ ಪೊಲೀಸ್ ಬ್ಯಾರಿಕೇಡ್‌ಗಳನ್ನು ಇರಿಸಿರುವುದು ಬಿಟ್ಟು ಮುಂದಿನ ಕೆಲಸ ಸಾಗುತ್ತಿಲ್ಲ ನಗರದ ಸಂಚಾರ ವ್ಯವಸ್ಥೆ ಸೇರಿದಂತೆ ಪೊಲೀಸ್ ಇಲಾಖೆಗೂ ಇದು ಸಮಸ್ಯೆಯಾಗಿದೆ ಎಂದಿರುವ ಅವರುಗಳು ಸಂಬAಧಿ ಸಿದ ಇಂಜಿನಿಯರ್ ಅವರನ್ನು ಪ್ರಶ್ನಿಸಿದರೆ ವರ್ಕ್ ಆರ್ಡರ್ ದೊರೆತಿಲ್ಲ ಎಂಬ ಉತ್ತರ ದೊರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶಕಂಡ ಅಪ್ರತಿಮ ಸೇನಾನಿಗೆ ಇದು ಅಗೌರವದಂತಾಗಿದ್ದು, ತಕ್ಷಣ ಕಾಮಗಾರಿ ನಡೆಸದಿದ್ದಲ್ಲಿ ಪ್ರತಿಭಟನೆ ನಡೆಸಲಿರುವುದಾಗಿ ಅವರುಗಳು ತಿಳಿಸಿದ್ದಾರೆ.