ಕಣಿವೆ, ನ. ೧೮: ಕಾಡಾನೆಗಳ ಹಾವಳಿಯಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಫಸಲು ಹಾನಿಯಾದ ಘಟನೆ ಕಣಿವೆ ಕಣಿವೆ, ನ. ೧೮: ಕಾಡಾನೆಗಳ ಹಾವಳಿಯಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಫಸಲು ಹಾನಿಯಾದ ಘಟನೆ ಕಣಿವೆ ಲಗ್ಗೆ ಇಡುವ ಕಾಡಾನೆಗಳು ಹುಲುಸೆ ಗ್ರಾಮದ ಕೃಷಿಕ ಮಲ್ಲಿಕಾ ಎಂಬವರಿಗೆ ಸೇರಿದ ಭತ್ತದ ಫಸಲು ತುಂಬಿದ ಗದ್ದೆಗಳನ್ನು ತುಳಿದು ತಿಂದು ಹಾನಿ ಹಡಿಸುತ್ತಿವೆ. ಇಲ್ಲಿ ಕಾಡಾನೆಗಳು ತಿಂದು ಹಾನಿಯಾಗಿದ್ದಕ್ಕಿಂತ ತುಳಿದು ಹಾನಿ ಮಾಡಿದ ಪ್ರಮಾಣವೇ ಜಾಸ್ತಿಯಾಗಿದೆ.

ಮೊದಲೇ ಈ ಬಾರಿ ಸರಿಯಾದ ಮಳೆಯಿಲ್ಲದೇ ಕಾಲುವೆಯಿಂದಲೂ ಸರಿಯಾಗಿ ನೀರು ಹರಿಸದೇ ಕೊಳವೆ ಬಾವಿಯ ನೀರನ್ನು ಹಾಯಿಸಿ ರೈತರು ಕಷ್ಟ ಪಟ್ಟು ಬೆಳೆದ ಭತ್ತದ ಫಸಲು ಕಾಡಾನೆಗಳ ಪಾಲಾಗಿದೆ.

ಕಾರ್ಮಿಕರ ಕೊರತೆಯಿಂದ ದುಪ್ಪಟ್ಟು ಪ್ರಮಾಣದಲ್ಲಿ ಹಣ ವ್ಯಯ ಮಾಡಿ ಬೆಳೆದ ಭತ್ತದ ಫಸಲು ಕೈಗೆ ಬಂದದ್ದು ಮನೆಯಲ್ಲಿನ ಧವಸ ಭಂಡಾರ ಸೇರದಿರುವುದು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ರೈತರು ನಷ್ಟಕ್ಕೆ ಒಳಗಾಗಿರುವ ಕಾಡಾನೆ ದಾಳಿಯ ಗದ್ದೆಗಳಿಗೆ ಬಂದು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವರದಿ : ಕೆ.ಎಸ್.ಮೂರ್ತಿ