ವೀರಾಜಪೇಟೆ, ನ. ೧೮: ದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಮಾಜಮುಖಿ ಸೇವೆಯನ್ನು ಒದಗಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕ್ಲಬ್ ಸದಸ್ಯರು ಮುಂದಾಗಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮೇಲ್ವೀನ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಮ್ಮತ್ತಿ. ವತಿಯಿಂದ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ಲಬ್ನ ಜಿಲ್ಲಾ ರಾಜ್ಯಪಾಲರ ಭೇಟಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಡಾ. ಮೆಲ್ವೀನ್ ಡಿಸೋಜ ಅವರು. ಪ್ರತಿಷ್ಠಿತ ಸಂಸ್ಥೆಯ ಸದಸ್ಯ ಎಂದು ಗುರುತಿಸುವುದಕ್ಕಿಂತ ಹೆಚ್ಚು ಸಮಾಜದ ಒಳಿತಿಗಾಗಿ ಸಮಾಜ ಸೇವೆಗಾಗಿ ತನ್ನನ್ನು ತಾನೂ ತೊಡಗಿಸಿಕೊಳ್ಳುವುದು ಸೂಕ್ತ ಎಂದರು. ಗಳಿಕೆಯು ಎಂದಿಗೂ ಶಾಶ್ವತವಲ್ಲ. ಗಳಿಕೆಯನ್ನು ಸಮಾಜಮುಖಿ ಸೇವೆಗೆ ಬಳಕೆ ಮಾಡಿದಲ್ಲಿ ಸಮಾಜವು ವ್ಯಕ್ತಿಯನ್ನು ಗುರುತಿಸುವಂತಾಗುತ್ತದೆ. ಸಮಾಜಕ್ಕೆ ನಾವು ನೀಡಿರುವ ಕೊಡುಗೆಯು ಮರಣದ ಬಳಿಕವೂ ಸಮಾಜವು ಮಾತನಾಡುವಂತಿರಬೇಕು. ಈ ನಿಟ್ಟಿನಲ್ಲಿ ಸರ್ವರು ಪ್ರಯತ್ನ ಮಾಡಬೇಕು. ಅಮ್ಮತ್ತಿ ಲಯನ್ಸ್ ಕ್ಲಬ್ ಆರಂಭವಾಗಿ ಕೆಲವು ವರ್ಷಗಳು ಸಂದರು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಹೆಮ್ಮೆಯ ವಿಷಯವಾಗಿದೆ. ಎಂದು ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಅಮ್ಮತ್ತಿಯ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್ ಅಮ್ಮತ್ತಿಯು ತನ್ನ ಸೇವಾ ವರ್ಷದಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸೇವಾ ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರು ಮತ್ತು ಪದಾಧಿಕಾರಿಗಳು ಸಹಕಾರವನ್ನು ನೀಡಿದೆ. ಮುಂದೆಯು ನೂತನವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕ್ಲಬ್ನ ಕಾರ್ಯದರ್ಶಿಗಳಾದ ಎಸ್.ಎಸ್. ಪೂಣಚ್ಚ ಅವರು ಕ್ಲಬ್ ನಡೆಸಿರುವ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಮ್ಮತ್ತಿಯ ಖಜಾಂಚಿ ಪ್ರಸಾದ್ ಚೆಂಗಪ್ಪ, ಜಿಲ್ಲಾ ಸಂಪುಟ ದರ್ಜೆ ಕಾರ್ಯದರ್ಶಿ ಓಸಾಲ್ಡ್ ಡಿಸೋಜ, ಲಿಯೋ ಕ್ಲಬ್ ಅಧ್ಯಕ್ಷೆ ರಂಜಿತ ಶೆಟ್ಟಿ, ವಲಯ ಅಧ್ಯಕ್ಷ ನವೀನ್ ಆಂಬೇಕಲ್ ಮತ್ತು ವಲಯ ಅಧ್ಯಕ್ಷರುಗಳಾದ ರೋಹಿತ್ ಸಿ.ಕೆ., ಸತೀಶ್ ಕುಮಾರ್, ಬಾಲಕೃಷ್ಣ, ವಿಶಾಲ್ ದೇವಯ್ಯ ಮತ್ತು ಜಿಲ್ಲಾ ರಾಜ್ಯಪಾಲರ ಸಹ ಸಂಯೋಜಕಿ ಗೀತಾ ರಾವ್ ಉಪಸ್ಥಿತರಿದ್ದರು.
ಜ್ಯೋತಿ ಪೊನ್ನಪ್ಪ ಸ್ವಾಗತಿಸಿ, ಕಾರ್ಯದರ್ಶಿ ಎಸ್.ಎಸ್. ಪೂಣಚ್ಚ ವಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಮ್ಮತ್ತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಕ್ಲಬ್ಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.