ಪೊನ್ನಂಪೇಟೆ, ನ. ೧೮: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ೨೦೨೩-೨೦೨೪ನೇ ಸಾಲಿನ ವಾರ್ಡ್ ಸಭೆಯು ತಾ. ೨೧ ಮತ್ತು ೨೩ ರಂದು ನಡೆಯಲಿದೆ.

ತಾ.೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಕೋಟೂರು ವಾರ್ಡ್ ಸಭೆ ಗ್ರಾ.ಪಂ. ಸದಸ್ಯ ಕೆ.ಎಂ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕೋಟೂರು ಅಂಗನವಾಡಿ ಕೇಂದ್ರದಲ್ಲಿ, ತಾ.೨೧ ರಂದು ಮಧ್ಯಾಹ್ನ ೨ ಗಂಟೆಗೆ ಮತ್ತೂರು ವಾರ್ಡ್ ಸಭೆ ಮತ್ತೂರು ಸಮುದಾಯ ಭವನದಲ್ಲಿ ಗ್ರಾ.ಪಂ. ಸದಸ್ಯೆ ಬಿ.ಎಂ.ಸುನಿತ ಅವರ ಅಧ್ಯಕ್ಷತೆಯಲ್ಲಿ, ತಾ.೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಕಿರುಗೂರು ವಾರ್ಡ್ ಸಭೆ ಕಿರುಗೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷ ಚೆಪ್ಪುಡೀರ ಡಿ. ರಾಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಿರುಗೂರು ಗ್ರಾ.ಪಂ. ಪ್ರಕಟಣೆಯಲ್ಲಿ ತಿಳಿಸಲಾಗಿದೆ.