ಕೂಡಿಗೆ, ನ. ೧೭: ಕೂಡಿಗೆ ರಾಮಲಿಂಗೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ ಆಚರಣೆ ಮಾಡಲಾಯಿತು.
ಸಹಕಾರ ಸಂಘದ ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ವಿ. ಬಸಪ್ಪ ನೆರವೇರಿಸಿ ಸಹಕಾರ ಕ್ಷೇತ್ರದ ಬೆಳವಣಿಗೆಯ ಮೂಲಕ ರೈತರ ಅಭಿವೃದ್ಧಿಗೆ ಪೂರಕವಾದ ಸಹಕಾರ ಸಂಸ್ಧೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಲೆಕ್ಕ ಸಹಾಯಕ ಕೆ.ಎಂ. ನಾಗರಾಜ್, ಮಾರಾಟ ಗುಮಾಸ್ತರಾದ ಎಂ.ಎಸ್. ದೀಪಕ್ ಪೂರ್ಣಿಮಾ, ಚಂದ್ರಶೇಖರ್, ಸೇರಿದಂತೆ ರೈತರು ಹಾಜರಿದ್ದರು.