ಸಿದ್ದಾಪುರ, ನ. ೧೮: ಪಟ್ಟಣದಲ್ಲಿ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೋ ವೈರಲ್ ಆಗಿದೆ. ಕರ್ತವ್ಯನಿರತ ಸಿದ್ದಾಪುರದ ಪೊಲೀಸ್ ಪೇದೆ ಸಂತೋಷ್ ಚೌವ್ಹಾಣ್ ಅವರ ಮೇಲೆ ಗುಹ್ಯದ ಗಣಪತಿ ಹಲ್ಲೆ ನಡೆ ಸಿದ ವ್ಯಕ್ತಿ. ಶನಿವಾರ ಸಂಜೆ ಅಂದಾಜು ೫.೩೦ ಸಮಯಕ್ಕೆ ಪಟ್ಟಣದಲ್ಲಿ ಬೈಕ್ ನಿಲುಗಡೆ ವಿಚಾರವಾಗಿ ಪೇದೆ ಮೇಲೆ ಗಣಪತಿ ಹಲ್ಲೆ ನಡೆಸಿದ್ದು, ಈ ಸಂಬAಧ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಗಿದೆ.