ಪಾಲಿಬೆಟ್ಟ, ನ. ೧೮: ಕಾಫಿ ತೋಟದ ನಡುವಿನ ಕಡಿದಾದ ರಸ್ತೆಗಳಲ್ಲಿ ವೇಗವಾಗಿ ಮುನ್ನುಗಿದ ಕಾರುಗಳು ರೋಚಕತೆಯನ್ನು ಸೃಷ್ಟಿಸಿದವು.
ಬ್ಲೂ ಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್ ಅಕಾಡೆಮಿ ಸಹಯೋಗದೊಂದಿಗೆ ರೋಬಸ್ಟಾ ೨೦೨೩ ರ್ಯಾಲಿ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ರ್ಯಾಲಿಪಟುಗಳು ಮಿಂಚಿನ ವೇಗ ಪ್ರದರ್ಶಿಸಿ ನೋಡುಗರನ್ನು ರೋಮಾಂಚನಗೊಳಿಸಿದರು.
ಬೆಳಿಗ್ಗೆ ೬ ಗಂಟೆಯಿAದಲೇ ಪಾಲಿಬೆಟ್ಟ ಹಾಗೂ ಆನಂದಪುರ ಸುತ್ತಮುತ್ತಲಿನ ತೋಟದ ರಸ್ತೆಯಲ್ಲಿ ಕಾರು ಹಾಗೂ ಜಿಪ್ಸಿ ಸೇರಿದಂತೆ ಒಟ್ಟು ೬೧ ವಾಹನಗಳು ಕಡಿದಾದ ಕಾಫಿ ತೋಟಗಳ ನಡುವಿನ ದುರ್ಗಮ ಹಾದಿಯಲ್ಲಿ ಸಂಚರಿಸಿದವು. ನಾ ಮುಂದು ತಾ ಮುಂದು ಎಂಬAತೆ ತಮ್ಮ ಸಾಹಸ ಪ್ರದರ್ಶನ ಮಾಡಿದರು.
ಕೆಲವು ವಾಹನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪರದಾಡಿದ ದೃಶ್ಯಗಳು ಕಂಡುಬAದವು. ಕೆಲವರು ನಿರೀಕ್ಷಿತ ಸಮಯ ಸಾಧಿಸಲು ಸಾಧ್ಯವಾಗದೆ ನಿರಾಸೆಯಾದರು. ರ್ಯಾಲಿ ಸಾಗುವ ಮಾರ್ಗದ ಬದಿ ಜನರು ನಿಂತು ರ್ಯಾಲಿಪಟುಗಳನ್ನು ಹುರಿದುಂಬಿಸಿದರು.
ತಾ. ೧೯ ರಂAದು (ಇಂದು) ಹೊಸಳ್ಳಿ ಹಾಗೂ ಮಾರ್ಗಳ್ಳಿ ಕಾಫಿ ತೋಟದಲ್ಲಿ ಬೆಳಿಗ್ಗೆ ೬ ಗಂಟೆಯಿAದ ರ್ಯಾಲಿ ಪ್ರಾರಂಭವಾಗಲಿದ್ದು ಸಂಜೆ ೫ ಕ್ಕೆ ಅಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. - ಪುತ್ತಂ ಪ್ರದೀಪ್