ಮಡಿಕೇರಿ, ನ. ೧೮: ‘ಕೂರ್ಗ್ ವೆಲ್‌ನೆಸ್ ಫೌಂಡೇಷನ್’ ಹಾಗೂ ನಟ ಮಿಲಿಂಡ್ ಸೋಮನ್ ಅವರುಗಳ ಆಶ್ರಯದಲ್ಲಿ ೭ನೇ ಆವೃತ್ತಿಯ ಬರಿಗಾಲು ಮ್ಯಾರಥಾನ್ ಡಿಸೆಂಬರ್ ೧೦ಕ್ಕೆ ನಡೆಯಲಿದೆ ಎಂದು ಫೌಂಡೇಷನ್‌ನ ಪ್ರಮುಖ ರಾದ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಅವರು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಈ ಮ್ಯಾರಥಾನ್ ಆಯೋಜಿಸಲಾಗುತ್ತಿದೆ. ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದಲೂ ನೂರಾರು ಮಂದಿ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುತ್ತಾರೆ. ನಾವು ಪ್ರಕೃತಿಯೊಂದಿಗೆ ಒಡಗೂಡುವ ಮೂಲಕ ಅದರ ರಕ್ಷಣೆ ಮಾಡುವ ಪ್ರೇರಣೆ ನಮ್ಮಲ್ಲಿ ಹುಟ್ಟಬೇಕೆಂಬ ಉದ್ದೇಶದಿಂದ ಮ್ಯಾರಥಾನ್‌ಅನ್ನು ಬರಿಗಾಲಿನಲ್ಲಿಯೇ ಇಷ್ಟು ವರ್ಷ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದೇ ಪರಿಕಲ್ಪನೆಯಲ್ಲಿ ಈ ವರ್ಷವೂ ಮ್ಯಾರಥಾನ್ ಜರುಗಲಿದೆ ಎಂಬುದಾಗಿ ‘ಕೂರ್ಗ್ ವೆಲ್‌ನೆಸ್ ಫೌಂಡೇಷನ್’ ಪ್ರಮುಖರಾದ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಅವರು ಮಾಹಿತಿ ನೀಡಿದ್ದಾರೆ.

ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಡಿ.೧೦ರ ಬೆಳಿಗ್ಗೆ ೫:೩೦ಕ್ಕೆ ೪ ವಿಭಾಗಗಳಲ್ಲಿ ಮ್ಯಾರಥಾನ್ ಪ್ರಾರಂಭಗೊಳ್ಳಲಿದೆ. ೪೨ ಕಿ.ಮೀ ದೂರ ಓಟದ ಫುಲ್ ಮ್ಯಾರಥಾನ್ ಸ್ಪರ್ಧೆ (ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಕ್ರಮವಾಗಿ ರೂ.೧೩,೫೦೦, ರೂ.೯,೦೦೦ ಹಾಗೂ ರೂ.೪,೫೦೦ ನೀಡಲಾಗುವುದು), ೨೧ ಕಿ.ಮೀ ದೂರ ಓಟದ ಹಾಫ್ ಮ್ಯಾರಥಾನ್ (ರೂ.೬,೩೦೦(ಪ್ರ), ರೂ.೪,೨೦೦(ದ್ವಿ) ಹಾಗೂ ರೂ.೨,೧೦೦(ತೃ) ಬಹುಮಾನ ವಿಜೇತರಿಗೆ ನೀಡಲಾಗುವುದು), ೧೦ ಕಿ.ಮೀ ಓಟದ ಸ್ಪರ್ಧೆಯಲ್ಲಿ ಮೊದಲ ೩ ವಿಜೇತರಿಗೆ ರೂ.೩,೦೦೦, ರೂ.೨,೦೦೦ ಹಾಗೂ ರೂ.೧,೦೦೦ ನೀಡಲಾಗುವುದು. ೫ ಕಿ.ಮೀ ಓಟದಲ್ಲಿ ವಿಜೇತರಿಗೆ ರೂ.೧,೫೦೦, ರೂ.೧,೦೦೦ ಹಾಗೂ ರೂ.೫೦೦ ನೀಡಲಾಗುವುದು.

ಆಸಕ್ತ ಓಟಗಾರರು hಣಣಠಿs://ಥಿouಣooಛಿಚಿಟಿಡಿuಟಿ.ಛಿom/ಡಿಚಿಛಿes/ಣhe-bಚಿಡಿeಜಿooಣ-mಚಿಡಿಚಿಣhoಟಿ-೨೦೨೩/ ವೆಬ್‌ಸೈಟ್ ಮೂಲಕ ನೋಂದಣಿ ಮಾಡಬಹುದಾಗಿದೆ. ಸ್ಪರ್ಧೆಯ ದಿನದಂದು ಸ್ಥಳದಲ್ಲಿಯೇ ನೋಂದಣಿ ಮಾಡುವ ಅವಕಾಶವನ್ನೂ ನೀಡಲಾಗಿದೆ.