ಮಡಿಕೇರಿ, ನ. ೧೬: ಮಾಯಮುಡಿ ದೊಡ್ಡಮಾಡ್ನ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯಿಂದ ತಾ. ೧೯ರಂದು ಎರಡನೇ ವರ್ಷದ ಬೊಡಿನಮ್ಮೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸಣ್ಣುವಂಡ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಯಮುಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ೧೨ ಬೋರ್ (೩೦ ಮೀ.), .೨೨ (೫೦ ಮೀ.)ನಲ್ಲಿ ತೆಂಗಿನಕಾಯಿಗೆ, ಏರ್ಗನ್ (೧೫ ಮೀ.)ನಲ್ಲಿ ಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ವಿಭಾಗದಲ್ಲಿಯೂ ಮೂರು ಬಹುಮಾನಗಳನ್ನು ನೀಡಲಾಗುವುದು. ಬೆಳಿಗ್ಗೆ ೧೦ ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, ಅಂದು ಮಧ್ಯಾಹ್ನ ೧೨ ಗಂಟೆವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಘಾಟನೆಯನ್ನು ಬಲ್ಲನಮಾಡ ಡಾ. ನಿಖಿಲ್ ನಂಜಪ್ಪ ಮಾಡಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಪ್ರಮುಖರಾದ ಕಂಜಿತAಡ ಸ್ವಾತಿ ಸುಬ್ರಮಣಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಮೇಶ್ ಮಾಹಿತಿಯಿತ್ತರು.
ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಕೈಲ್ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬವನ್ನು ಕಂಗಳತ್ತ್ನಾಡ್ ಮಂದ್ನಲ್ಲಿ ಆಚರಿಸುವುದರ ಮೂಲಕ ಇಂದಿನ ಯುವ ಜನತೆಗೆ ಕೊಡಗಿನ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ಸಮಿತಿಯು ಸ್ವಾತಂತ್ರö್ಯ ದಿನವನ್ನು ಮಾಜಿ ಯೋಧರ ದಿನವನ್ನಾಗಿ ಆಚರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೮ ಮಂದಿಯನ್ನು ಸನ್ಮಾನಿಸಿದೆ. ಕಾವೇರಿ ತೀರ್ಥಪೂಜೆ ಮಾಡಿ ಅಂದು ೮೦ ವರ್ಷ ಮೇಲ್ಪಟ್ಟ ಸುಮಾರು ೨೭ ಮಂದಿಯನ್ನು ಸನ್ಮಾನ ಮಾಡಲಾಗಿದೆ. ವಂಶಿಮಾರ್ಲ ಹಾಗೂ ಜೆ.ಕೆ. ಟರ್ಸ್ ಪ್ರಾಯೋಜಕತ್ವದಲ್ಲಿ ಬೊಡಿನಮ್ಮೆ ನಡೆಯಲಿದೆ ಎಂದು ರಮೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಚೆಪ್ಪುಡಿರ ಪ್ರದೀಪ್ ಪೂವಯ್ಯ, ಸದಸ್ಯರಾದ ಸಣ್ಣುವಂಡ ಸೋಮಣ್ಣ, ಆಪಟ್ಟೀರ ವೀಕ್ಷಿತ್ ಉಪಸ್ಥಿತರಿದ್ದರು.