ಮಡಿಕೇರಿ, ನ. ೧೬: ಶಿವಮೊಗ್ಗದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ತಾ. ೧೯ ರಂದು ಕರುನಾಡು ಸಾಮರಸ್ಯ ಕವಿ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಪಂಚಭಾಷಾ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಕನ್ನಡ, ಕೊಡವ, ಬ್ಯಾರಿ, ತುಳು, ಕೊಂಕಣಿ ಭಾಷೆಗಳ ಕವಿಗೋಷ್ಠಿ ಜರುಗಲಿದೆ. ಕೊಡವ ಕವಿಗೋಷ್ಠಿ ಬಹುಭಾಷಾ ಕವಿಯತ್ರಿ ಉಳುವಂಗಡ ಕಾವೇರಿ ಉದಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕವಿಗಳಾದ ಪಂದ್ಯAಡ ರೇಣುಕಾ ಸೋಮಯ್ಯ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಬಾದುಮಂಡ ಬೀನಾ ಕಾಳಯ್ಯ, ಡಾ. ಎ.ಎಸ್. ಪೂವಮ್ಮ ಹಾಗೂ ಚಂಗಚAಡ ರಶ್ಮಿ ನಿತಿನ್ ಪಾಲ್ಗೊಳ್ಳಲಿದ್ದಾರೆ.