ವೀರಾಜಪೇಟೆ, ನ. ೧೬: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಂತರ ಕೊಡವ ಸಮಾಜ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಜಯಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿತು. ವೀರಾಜಪೇಟೆ ಕೊಡವ ಸಮಾಜ (ಎ) ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ತಾ. ೧೧ ರಿಂದ ಆರಂಭಗೊAಡ ಪಂದ್ಯಾವಳಿಯಲ್ಲಿ ನಾಪೋಕ್ಲು, ವೀರಾಜಪೇಟೆ ಎ ಹಾಗೂ ಬಿ, ಟಿ.ಶೆಟ್ಟಿಗೇರಿ ಎ ಹಾಗೂ ಬಿ, ಪೊನ್ನಂಪೇಟೆ, ಕುಶಾಲನಗರ, ಬಾಳೆಲೆ, ಮಕ್ಕಂದೂರು, ಮತ್ತು ಮೂರ್ನಾಡು ಕೊಡವ ಸಮಾಜಗಳು ಭಾಗವಹಿಸಿದ್ದವು.
ಫೈನಲ್ ಫಲಿತಾಂಶ
ವೀರಾಜಪೇಟೆ ಕೊಡವ ಸಮಾಜ ಎ ಮತ್ತು ಪೊನ್ನಂಪೇಟೆ ಕೊಡವ ಸಮಾಜ ತಂಡಗಳ ನಡುವಿನ ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಪೊನ್ನಂಪೇಟೆ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ವೀರಾಜಪೇಟೆ ಕೊಡವ ಸಮಾಜದ ಪರವಾಗಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಡಿರುವ ದರ್ಶನ್ ಮಾಚಯ್ಯ ೧೭ ರನ್ ಗಳಿಸಿ ಔಟಾದರೆ, ನಿಗದಿತ ೧೨ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೯೩ ರನ್ ಪೇರಿಸಿ ೯೪ ರನ್‌ಗಳ ಗುರಿಯನ್ನು ಎದುರಾಳಿಗೆ ನೀಡಿತು.
ಪೊನ್ನಂಪೇಟೆ ಕೊಡವ ಸಮಾಜದ ಶರಣ್ ಅಯ್ಯಪ್ಪ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ೨೨ ರನ್‌ಗಳು ನೀಡಿ ೩ ವಿಕೆಟ್ ಕಸಿದುಕೊಂಡರು. ಪೊನ್ನಂಪೇಟೆ ಕೊಡವ ಸಮಾಜದ ಶರಣ್ ಅಯ್ಯಪ್ಪ ತನ್ನ ಆಲ್‌ರೌಂಡ್ ಪ್ರದರ್ಶನ ನೀಡಿ ವೈಯಕ್ತಿಕವಾಗಿ ೨೭ ರನ್ ಗಳಿಸಿದರು. ಕೊನೆ ಹಂತದ ಎರಡು ಒವರ್‌ಗಳು ರೋಚಕತೆ ಮೂಡಿಸಿತು. ತಂಡ ೫ ವಿಕೆಟ್ ಕಳೆದುಕೊಂಡರು ಗುರಿಗಿಂತ ೫ ರನ್ ಹೆಚ್ಚು ಗಳಿಸಿ ಗೆಲುವಿನ ನಗೆಬೀರಿತು.
(ಮೊದಲ ಪುಟದಿಂದ) ವೀರಾಜಪೇಟೆ ಕೊಡವ ಸಮಾಜದ ಬೊಳಕಾರಂಡ ದರ್ಶನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ತನ್ನದಾಗಿಸಿಕೊಂಡರು.
ಸೆಮಿಫೈನಲ್ ಫಲಿತಾಂಶ
ತಾ. ೧೪ ರಂದು ನಡೆದ ೨ನೇ ಸೆಮಿಫೈನಲ್ ಪಂದ್ಯಾಟ ವೀರಾಜ ಪೇಟೆ ಕೊಡವ ಸಮಾಜ ಎ ಮತ್ತು ಟಿ.ಶೆಟ್ಟಿಗೇರಿ ಕೊಡವ ಸಮಾಜ ಬಿ ತಂಡಗಳ ಮಧ್ಯೆ ನಡೆದು ವೀರಾಜ ಪೇಟೆ ಎ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ಸೆಮಿಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ವೀರಾಜಪೇಟೆ ತಂಡ ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತು. ೧೨ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೯೬ ರನ್ ಗುರಿ ನೀಡಿತು. ನಂತರದಲ್ಲಿ ಬ್ಯಾಟಿಂಗ್ ಮಾಡಿದ ಟಿ.ಶೆಟ್ಟಿಗೇರಿ ತಂಡದಲ್ಲಿ ಮಾಚಿಮಾಡ ಕಾರ್ಯಪ್ಪ ವೈಯಕ್ತಿಕ ೫೬ ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಎದುರಾಳಿ ತಂಡ ನೀಡಿದ ಗುರಿ ತಲುಪುವಲ್ಲಿ ವಿಫಲವಾಗಿ ೫ ವಿಕೆಟ್ ನಷ್ಟಕ್ಕೆ ೭೭ ರನ್ ಪಡೆದು ಸೋಲು ಅನುಭವಿಸಿತು. ತಾ. ೧೩ ರಂದು ವೀರಾಜಪೇಟೆ ಬಿ ತಂಡ ಮಣಿಸಿ ಪೊನ್ನಂಪೇಟೆ ಕೊಡವ ಸಮಾಜ ಫೈನಲ್ ಪ್ರವೇಶಿಸಿತ್ತು.
ಸೆಮಿಫೈನಲ್ ಪಂದ್ಯಾಟದಲ್ಲಿ ಸೋಲು ಅನುಭವಿಸಿದ ಎರಡು ತಂಡಗಳಿಗೆ ಟ್ರೋಫಿ ನೀಡಲಾಯಿತು.
ಪಂದ್ಯಾವಳಿಯ ಉತ್ತಮ ಬೌಲರ್ ಪ್ರಶಸ್ತಿಯನ್ನು ಆಟ್ರಂಗಡ ತಶ್ವೀನ್, ಉತ್ತಮ ಬ್ಯಾಟ್ಸ್ಮೆನ್ ಪ್ರಶಸ್ತಿ ಮಂಡೆಪAಡ ತಿಮ್ಮಯ್ಯ, ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಮುಕ್ಕಾಟೀರ ಲಸಿತ್ ಮಾದಪ್ಪ ತನ್ನದಾಗಿಸಿಕೊಂಡರು.
ಅದೇಯಂಗಡ ಶಾಶ್ವತ್, ನವೀನ್ ಚೆಕ್ಕೇರ, ಅಳಮೇಂಗಡ ಮೋನಾ ಚೆಂಗಪ್ಪ, ಮಾಚಂಗಡ ದರ್ಶನ್, ಕೊಕ್ಕೆಂಗಡ ರಂಜಿ, ಮತ್ತು ಕೊಟ್ಟಂಗಡ ಸೂರಜ್ ತೀರ್ಪುಗಾರಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಕಾಂಡೇರ ಡಾನ್ ಕುಶಾಲಪ್ಪ ಅವರು ವೀಕ್ಷಕ ವಿವರಣೆ ನೀಡಿದರು.