ಸಿದ್ದಾಪುರ, ನ. ೧೬: ನೆಲ್ಲಿಹುದಿಕೇರಿಯಲ್ಲಿ ನೂತನವಾಗಿ ಪ್ರಾರಂಭವಾದ ಅಂಗನವಾಡಿ ಕೇಂದ್ರವನ್ನು ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪೌಷ್ಟಿಕ ಆಹಾರ ಕೊರತೆಯಿಂದ ಮಕ್ಕಳಲ್ಲಿ ಕೆಲವೊಂದು ಖಾಯಿಲೆಗಳು ಬರುತ್ತಿದ್ದವು, ಈ ಹಿನ್ನೆಲೆಯಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಎಲ್ಲರೂ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ದಾಖಲಿಸಬೇಕೆಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಮಲ ಮಾತನಾಡಿ, ೩೫೦ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಬಹುದಾಗಿದ್ದು ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿಯ ದಾನಿಗಳ ಹಾಗೂ ಗ್ರಾ.ಪಂ. ಸದಸ್ಯರುಗಳ ಸಹಕಾರದಿಂದ ಖಾಸಗಿ ಕಟ್ಟಡದಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಧನಲಕ್ಷಿö್ಮ, ಉಪಾಧ್ಯಕ್ಷೆ ಪ್ರಮಿಳಾ, ಪಿಡಿಓ ನಂಜುAಡ ಸ್ವಾಮಿ, ಗ್ರಾ.ಪಂ ಸದಸ್ಯರಾದ ಎ.ಕೆ. ಹಕೀಂ, ಮುಸ್ತಫಾ, ಮುಖಂಡರುಗಳಾದ ನಿರ್ವಾಣಿ ವಿಜಯ್, ಬಶೀರ್ ಇನ್ನಿತರರು ಹಾಜರಿದ್ದರು.