ಕೂಡಿಗೆ, ನ. ೧೫ : ದೀಪಾವಳಿ ಹಬ್ಬದ ಅಂಗವಾಗಿ ಕಾರ್ತಿಕ ಮಾಸದ ಒಂದ ತಿಂಗಳ ಪೂಜೋತ್ಸವ ಕಾರ್ಯಕ್ರಮವು ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಆರಂಭಗೊAಡಿದೆ.
ಧಾರ್ಮಿಕ ಸಂಪ್ರದಾಯದAತೆ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಗ್ರಾಮದಲ್ಲಿರುವ ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೀಪಾವಳಿ ಹಬ್ಬದ ದಿನದಿಂದ ಕಾರ್ತಿಕ ಮಾಸದ ಪೂಜೋತ್ಸವವು ಆರಂಭಗೊAಡಿರುವ ಹಿನ್ನೆಲೆಯಲ್ಲಿ ಕೂಡಿಗೆ, ಹೆಬ್ಬಾಲೆ , ತೊರೆನೂರು, ಶಿರಂಗಾಲ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಉಪಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದ್ದು, ಗ್ರಾಮದ ಪ್ರಮುಖ ಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊAಡಿವೆ. ಇದರ ಅಂಗವಾಗಿ ಗ್ರಾಮಗಳಲ್ಲಿರುವ ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವಾಲಯ ಸಮಿತಿಯ ವತಿಯಿಂದ ಸಂಪ್ರದಾಯದAತೆ ಒಂದು ತಿಂಗಳ ಕಾರ್ತಿಕ ಪೂಜೋತ್ಸವು ಆರಂಭಗೊAಡಿವೆ.