ಮಡಿಕೇರಿ, ನ. ೧೫: ಕರ್ನಾಟಕ ಎನ್ನುವ ಹೆಸರಾಗಿ ೫೦ ವರ್ಷ ಸಂದಿರುವ ಸಂದರ್ಭದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ‘ಸುವರ್ಣ ಸಂಭ್ರಮ ಕನ್ನಡ ಹಬ್ಬ’ ಕಾರ್ಯಕ್ರಮವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಆಯೋಜಿಸುತ್ತಿದ್ದು ವಿವಿಧ ಕ್ಷೇತ್ರಗಳ ಸಾಧಕರಿಂದ ಕರ್ನಾಟಕ ಸುಪುತ್ರಿ ಮತ್ತು ಕರ್ನಾಟಕ ಸುಪುತ್ರ ಹಾಗೂ ವರ್ಷದ ಕನ್ನಡಿಗ-೨೦೨೩ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಗೀತ, ಭರತನಾಟ್ಯ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ರಾಜಕೀಯ ಮುಂತಾದ ಕ್ಷೇತ್ರಗಳ ಸಾಧಕರು ದಿನಾಂಕ ೧೫-೧೨-೨೦೨೩ರ ಒಳಗಾಗಿ ತಮ್ಮ ಸ್ವ-ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಪ್ರಶಸ್ತಿ ಪತ್ರ, ಪದಕ, ನೆನಪಿನ ಕಾಣಿಕೆ, ಹಾರ-ತುರಾಯಿಗಳನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.

ವಿಳಾಸ: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ನಂ. ೬೭೪, ೧೦ನೇ ‘ಸಿ’ ಅಡ್ಡರಸ್ತೆ, ೮ನೇ ಮುಖ್ಯರಸ್ತೆ, ೩ನೇ ಹಂತ, ೪ನೇ ವಿಭಾಗ, ಬಸವೇಶ್ವರನಗರ, ಬೆಂಗಳೂರು- ೫೬೦೦೭೯. ಹೆಚ್ಚಿನ ಮಾಹಿತಿಗಾಗಿ ೯೪೪೮೨೬೦೪೧೭ ಸಂಖ್ಯೆಗೆ ಸಂಪರ್ಕಿಸಬಹುದು.