'

ಗೋಣಿಕೊಪ್ಪ ವರದಿ, ನ. ೧೩: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ೪ ತಂಡಗಳಿಗೆ ಗೆಲುವಿನ ಸಿಹಿ ದೊರೆಯಿತು.

ಕುಂದ ಬೊಟ್ಯತ್ನಾಡ್ ತಂಡವು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೇಲ್ ವಿರುದ್ಧ ೪-೩ ಗೋಲುಗಳ ಗೆಲುವು ದಾಖಲಿಸಿತು. ಕುಂದ ಪರವಾಗಿ ಬೋಪಣ್ಣ ೨, ಪ್ರಸಾದ್, ಸುದೇಶ್, ಕೂಡಿಗೆ ಪರ ಫಾಹದ್, ಸುಪ್ರಿತ್, ಸಂಕೇತ್ ಗೋಲು ಹೊಡೆದರು.

ಮೂರ್ನಾಡು ಎಂಆರ್‌ಎಫ್ ತಂಡವು ಕಿರುಗೂರು ತಂಡವನ್ನು ೪-೨ ಗೋಲುಗಳ ಅಂತರದಲ್ಲಿ ಮಣಿಸಿತು. ಎಂಅರ್‌ಎಫ್ ಆಟಗಾರರಾದ ಸುಮನ್, ದೇವಯ್ಯ, ವಿಪಿನ್, ಬಿದ್ದಪ್ಪ, ಕಿರುಗೂರು ತಂಡದ ಕಾರ್ಯಪ್ಪ, ದಿವಾನ್ ಗೋಲು ಬಾರಿಸಿದರು.

ಟೈಕೂನ್ ಕುಶಾಲನಗರ ಮತ್ತು ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳ ಆಟಗಾರರು ಗೋಲು ದಾಖಲಿಸುವಲ್ಲಿ ಎಡವಿದರು.

ಮೂರ್ನಾಡು ಬ್ಲೇಜ್ ತಂಡಕ್ಕೆ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ವಿರುದ್ಧ ೫-೦ ಗೋಲುಗಳ ಜಯ ದೊರೆಯಿತು. ನಾಣಯ್ಯ ೪ ಗೋಲು ಸಿಡಿಸಿ ಸಂಭ್ರಮಿಸಿದರು. ಭವನ್ ೧ ಗೋಲು ಹೊಡೆದರು.

ಗೋಣಿಕೊಪ್ಪ ಎಎಸ್‌ಎಫ್ ತಂಡಕ್ಕೆ ಡ್ರಿಬ್ರ‍್ಸ್ ಹೆಂಪ್ ತಂಡವನ್ನು ೬-೪ ಗೋಲುಗಳಿಂದ ಸೋಲಿಸಿತು. ಎಎಸ್‌ಎಫ್ ಪರ ಕುಶಾಲಪ್ಪ ೩ ಗೋಲು ಹೊಡೆದು ಸಂಚಲನ ಮೂಡಿಸಿದರು. ಪೊನ್ನಣ್ಣ, ನಂಜುAಡ, ತಮ್ಮಯ್ಯ, ಹೆಂಪ್ ಪರವಾಗಿ ಮುತ್ತಣ್ಣ, ಚಿಣ್ಣಪ್ಪ, ಕರುಣ್, ರಂಜಿತ್ ತಲಾ ಒಂದೊAದು ಗೋಲು ಬಾರಿಸಿದರು.