ಶ್ರೀಮಂಗಲ, ನ. ೧೩: ಪೊನ್ನಂಪೇಟೆ ಉಪ ನೋಂದಣಾಧಿಕಾರಿ ಚೇತನ ಎನ್. ಎಸ್. ಅವರನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾ ಖೆಯ ಬೆಂಗಳೂರಿನ ಕಾರ್ಯ ಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು.

ರಾಜ್ಯಾದ್ಯಂತ ನೂತನ ಜನಸ್ನೇಹಿ ಕಾವೇರಿ ತಂತ್ರಾAಶದ ೨.೦ ಯಶಸ್ವಿ ಅನುಷ್ಠಾನ, ೨೦೨೨-೨೩ನೇ ಸಾಲಿನಲ್ಲಿ ಗುರಿಮೀರಿ ಅಧಿಕ ರಾಜಸ್ವ ಸಂಗ್ರಹಣೆ, ೨೦೨೩-೨೪ರ ಸಾಲಿನಲ್ಲಿ ಸ್ಥಿರಾಸ್ತಿ ಮಾರ್ಗಸೂಚಿಗಳ ಪರಿಷ್ಕರಣೆಯಲ್ಲಿ ಮಾಡಿದ ಸಾಧನೆಗಾಗಿ ರಾಜ್ಯ ಸರಕಾರದಿಂದ ಚೇತನ ಎನ್. ಎಸ್.ಅವರು ಸನ್ಮಾನಕ್ಕೆ ಭಾಜನರಾಗಿದ್ದಾರೆ. ಈ ಸಂದರ್ಭ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ.ಮಹೇಶ್, ನೋಂದಾಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ.ಮಮತಾ ಜಿ.ಆರ್ ಹಾಜರಿದ್ದರು.