ಕಣಿವೆ, ನ. ೧೨: ಮಕ್ಕಳ ವಿದ್ಯಾಭ್ಯಾ ಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಗಳನ್ನು ಕಲಿಸಬೇಕೆಂದು ಕೊಡಗು ಜಿಲ್ಲಾ ಮಲಯಾಳಿ ಸಮಾಜದ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ್ ಕರೆ ನೀಡಿದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಯಾಳಿ ಸಮಾಜದ ವತಿಯಿಂದ ಕಾನ್‌ಬೈಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ಓಣಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿರಿಸಿ ಗುರು ಹಿರಿಯರಿಗೆ ಗೌರವ ನೀಡುವ, ಸತ್ಕರಿಸುವಂತಹ ಸತ್ಪçಜೆಗಳಾಗಿ ರೂಪಿಸಬೇಕಿದೆ. ಎಲ್ಲಿ ನೋಡಿದರೂ ಕೂಡ ಮಕ್ಕಳು ಮೊಬೈಲ್‌ನಲ್ಲಿ ಮಗ್ನರಾಗುತ್ತಾ ತಮ್ಮ ಎದುರು ಯಾರೇ ಹಿರಿಯರು ಬಂದರೂ ಕೂಡ ಗೌರವ ನೀಡದಂತಹ ಕೆಟ್ಟ ಮನಸ್ಥಿತಿಗೆ ಒಳಗಾಗುತ್ತಿರುವುದರಿಂದ ಪೋಷಕರು ಈ ಬಗ್ಗೆ ಎಚ್ಚರವಹಿಸಿ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಲು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಸಾಲದು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡ ಬೇಕಿದೆ ಎಂದು ರವಿ ಮಾತನಾಡಿದರು.

ಜಿಲ್ಲೆಯಲ್ಲಿ ೧೪ ಕಡೆಗಳಲ್ಲಿ ಮಲಯಾಳಿ ಸಮಾಜಗಳಿವೆ. ಜಿಲ್ಲೆಯಾದ್ಯಂತ ಇನ್ನೂ ಕೂಡ ಹಲವೆಡೆ ಗಳಲ್ಲಿ ರಚನೆಯಾಗಬೇಕಾಗಿದೆ. ಹಿಂದೂಗಳು ನಾವೆಲ್ಲಾ ಒಂದಾಗಲೇ ಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.

ಕುತಂತ್ರ ಹಾಗೂ ಕುಕೃತ್ಯಗಳ ಬಗ್ಗೆ ಎಚ್ಚರ ವಹಿಸದಿದ್ದಲ್ಲಿ ಹಿಂದೂಗಳಿಗೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ವಿಜಯ್ ಮಾರ್ಮಿಕವಾಗಿ ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಬಾರ) ಮಂಜೇಶ್ ಮಾತನಾಡಿ, ಮಲಯಾಳಿ ಬಾಂಧವರು ಕೊಡಗಿನ ಎಲ್ಲಾ ಜನರೊಂದಿಗೆ ಸಾಮರಸ್ಯದೊಂದಿಗೆ ಉತ್ತಮ ಬದುಕು ಕಟ್ಟಿಕೊಂಡು ಸನಾತನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕಾನ್‌ಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಂದೋಡಿ ಜಗನ್ನಾಥ್ ಮಾತನಾಡಿ, ಮಾರಕವಾದ ಮೊಬೈಲ್ ಗಳಿಂದಾಗಿ ಇಂದು ಮಕ್ಕಳು ಸಂಪ್ರದಾ ಯಗಳನ್ನು ಮರೆಯುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಓಣಂ ಆಚರಣೆ ಯಂತಹ ಧಾರ್ಮಿಕ ಕಾರ್ಯಕ್ರಮ ಗಳು ಎಲ್ಲರ ಕಣ್ತೆರೆಸುತ್ತವೆ ಎಂದರು. ಮಲಯಾಳಿ ಸಮಾಜದ ಅಧ್ಯಕ್ಷ ವಿ.ಕೆ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಓಣಂ ಆಚರಣೆ ಅಂಗವಾಗಿ ಮಹಿಳೆಯರಿಗೆ ಪೂಕಳಂ ಸ್ಪರ್ಧೆ ಹಾಗೂ ಮಕ್ಕಳಿಗೆ ನೃತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾನ್‌ಬೈಲ್ ಗ್ರಾಮ ಪಂಚಾಯಿತಿ ಪಿಡಿಓ ಗೂಳಪ್ಪ ಕೂತಿನ, ನಾಕೂರು ಕೊಡವ ಕೂಟದ ಅಧ್ಯಕ್ಷ ಕಾಯಪಂಡ ಎ.ಕಾರ್ಯಪ್ಪ, ಕಾಫಿ ಬೆಳೆಗಾರ ಕಲ್ಮಾಡಂಡ ಎಸ್.ಸುರೇಶ್, ಕರವಂಡ ಕುಂಞಪ್ಪ, ನಾಕೂರು ಗಂಗಾಧರೇಶ್ವರ ದೇವಾಲಯದ ಅಧ್ಯಕ್ಷ ಎಲ್.ಎಂ. ರುದ್ರೇಶ್, ನಾಕೂರು ಯೂತ್ ಕ್ಲಬ್ ಅಧ್ಯಕ್ಷ ಎ.ಟಿ. ಚಂದ್ರಶೇಖರ್, ಸೋಮವಾರಪೇಟೆ ತಾಲೂಕು ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ. ಪ್ರಕಾಶ್, ಚೋಮಣಿ, ರಂಜಿನಿ, ಸಜಿ, ವಿ.ಕೆ. ವಿಜಯಕುಮಾರ್, ಬಿ.ಜಿ. ರಮೇಶ್, ಮೊದಲಾದವರಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾ ದವರಿಗೆಲ್ಲರಿಗೂ ಕೇರಳದ ವಿಶೇಷ ಅಡುಗೆಯವರಿಂದ ಓಣಂ ಸದ್ಯ ಉಣಬಡಿಸಲಾಯಿತು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರನಾರಾಯಣ್ ಸ್ವಾಗತಿಸಿ, ಕೆ.ಜಿ. ರಾಜ ವಂದಿಸಿದರು.