ಶನಿವಾರಸಂತೆ, ನ. ೧೨: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಕಾರ್ಯಕ್ರಮವನ್ನು ಸಂಭ್ರಮ-ಸಡಗರದಿAದ ಆಚರಿಸಲಾಯಿತು.

ಶಾಲೆಯ ನೇಸರ ಇಕೋ ಕ್ಲಬ್ ವತಿಯಿಂದ ವಿಜ್ಞಾನ ಶಿಕ್ಷಕಿ ಎಚ್.ಎನ್.ಮಂಗಳಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ‘ಪರಿಸರ ಮಾಲಿನ್ಯ ತಡೆಗಟ್ಟಲು ಪಟಾಕಿ ತ್ಯಜಿಸಿ’ ‘ದೀಪ ಬೆಳಗಿಸಿ ಹಬ್ಬ ಆಚರಿಸಿ’ ಎಂಬ ಘೋಷಣೆಯೊಂದಿಗೆ ದೀಪ ಬೆಳಗಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಶಿಕ್ಷಕಿ ಮಂಗಳಾ ಮಾತನಾಡಿ, ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕು. ಪರಿಸರಕ್ಕೆ ಮಾರಕವಾದ ಪಟಾಕಿ ಹಚ್ಚುವಿಕೆಗೆ ವಿದಾಯ ಹೇಳೋಣ. ಜನತೆಯಲ್ಲಿ ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸೋಣ ಎಂದು ಕರೆ ನೀಡಿದರು.

ಮುಖ್ಯಶಿಕ್ಷಕ ಪಿ.ನರಸಿಂಹಮೂರ್ತಿ ಮಾತನಾಡಿ, ದೀಪ ಜ್ಞಾನದ ಸಂಕೇತ. ಪರಿಸರದ ಜತೆ ಶಬ್ಧ ಮಾಲಿನ್ಯಕ್ಕೂ ಕಾರಣವಾಗಿರುವ ಪಟಾಕಿ ಸಿಡಿಸದೇ ದೀಪ ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸೋಣ ಎಂದು ಹೇಳಿ ಪಟಾಕಿ ಹಚ್ಚುವುದರಿಂದಾಗುವ ಅನಾಹುತಗಳ ಅರಿವು ಮೂಡಿಸಿದರು.

ಸಹಶಿಕ್ಷಕರಾದ ಸಿ.ಆರ್. ಗೋಪಾಲ್, ವಿ.ರಂಗಸ್ವಾಮಿ, ಎಚ್.ಪಿ.ಭವಾನಿ, ಎ.ಜಿ.ಸರೋಜಿನಿ, ಸಿಬ್ಬಂದಿ ಉಪಸ್ಥಿತರಿದ್ದರು.