ಮಡಿಕೇರಿ, ನ. ೧೨: ಜಾಗಕ್ಕೆ ಸಂಬAಧಿಸಿದAತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸಿರುವ ಆರೋಪದಂತೆ ನಾಲ್ವರ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಕಣಗಾಲು ಗ್ರಾಮದ ಯು.ಬಿ. ಚಂಗಪ್ಪ ಅವರು ನೀಡಿರುವ ದೂರಿನಂತೆ ಬಿಳಿಗೇರಿ ಗ್ರಾಮದ ಹೆಚ್.ಎ. ಮುತ್ತಪ್ಪ, ಅವರ ಪತ್ನಿ ಕೆ.ಕೆ. ಕಮಲಾಕ್ಷಿ, ಮಗ ಕೆ.ಎಂ. ಪವನ್ ಹಾಗೂ ಸಂಗಯ್ಯನಪುರ ಗ್ರಾಮದ ಹುಲಿಮನೆ ಬೋಪಯ್ಯ ಅವರುಗಳ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.

ಪಿರ್ಯಾದಿ ಚಂಗಪ್ಪ ಅವರ ತಂದೆ ಉಳುವಾರನ ಬೋಪಯ್ಯ ಅವರು ಹುಲಿಮನೆ ಅಪ್ಪಯ್ಯ ಎಂಬವರಿAದ ದೊಡ್ಡಕಣಜಾಲು ಗ್ರಾಮದ ಸರ್ವೆ ನಂ. ೧/೧೮ ರಲ್ಲಿ ಮೂರು ಎಕರೆ ಜಾಗವನ್ನು ೧೯೬೮ ರಲ್ಲಿ ಕ್ರಯಕ್ಕೆ ಪಡೆದುಕೊಂಡು ನೋಂದಣಿಯಾಗಿತ್ತು. ಆದರೆ ಕಾರಣಾಂತರಗಳಿAದ ಇದು ಬೋಪಯ್ಯ ಅವರ ಹೆಸರಿಗೆ ಖಾತೆ ಆಗದೆ ಪಹಣಿಯಲ್ಲಿ ಸರಕಾರ ಎಂದಾಗಿ ನಮೂದಾಗಿತ್ತು. ಈ ಬಗ್ಗೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ ನಂತರ ಇದು ಹುಲಿಮನೆ ಅಪ್ಪಯ್ಯ ಅವರ ಹೆಸರಿಗೆ ಪಹಣಿಯಾಗಿತ್ತು. ಆದರೆ ನಂತರದಲ್ಲಿ ಈ ಜಾಗವನ್ನು ಹುಲಿಮನೆ ಮುತ್ತಪ್ಪ ಅ/o ಬೋಪಯ್ಯ ಎಂಬವರು ನಕಲಿ ವಿಳಾಸ, ನಕಲಿ ಮರಣಪತ್ರ ಮತ್ತಿತರ ದಾಖಲೆ ಸೃಷ್ಟಿಸಿ ತಮ್ಮ ಕುಟುಂಬದ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸಿರುವುದಾಗಿ ದೂರು ನೀಡಲಾಗಿದೆ. ಇದರಂತೆ ದೂರಿನಲ್ಲಿ ಉಲ್ಲೇಖಿಸಿರುವವರ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.