ಮಡಿಕೇರಿ, ನ. ೧೨: ಆದಿಮ ಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದ ಭದ್ರತೆಯ ಅಗತ್ಯವಿದೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದು ಮತ್ತು ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದ್ದಾರೆ.

ಸಿಎನ್‌ಸಿ ವತಿಯಿಂದ ನೆಲಜಿ ನಾಡ್‌ಮಂದ್‌ನಲ್ಲಿ ನಡೆದ ಪಾದ ಯಾತ್ರೆ ಮತ್ತು ಕೊಡವ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು. ಸಂವಿ ಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರು ವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯ ವಾಗಿದೆ. ಆದ್ದರಿಂದ ಉಚ್ಚ ನ್ಯಾಯಾ ಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ÷್ಮ, ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿ ಸಬೇಕು ಎಂದು ಒತ್ತಾಯಿಸಿದರು.

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾಲ್ಗೊಂ ಡಿದ್ದ ಕೊಡವ, ಕೊಡವತಿಯರು ಮಾನವ ಸರಪಳಿಯನ್ನು ರಚಿಸಿದರು. ಸೂರ್ಯ-ಚಂದ್ರ, ಮಾತೃ ಭೂಮಿ, ದೈವಿಕ ವಸಂತ ಕಾವೇರಿ, ಸಂವಿಧಾನ ಮತ್ತು ಗುರು- ಕರೋಣ ಹೆಸರಿನಲ್ಲಿ ಸಿಎನ್‌ಸಿ ಯ ಕೊಡವ ಲ್ಯಾಂಡ್ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಅಪುö್ಪಮಣಿಯಂಡ ಗೌರಿ, ಅಪುö್ಪಮಣಿಯಂಡ ಶೈಲ, ನಂದಿನೆರ ವಂಡ ಪಾರ್ವತಿ, ಅಪುö್ಪಮಣಿಯಂಡ ಎಂ.ರಘು ಸುಬ್ಬಯ್ಯ, ಕೈಬುಲೀರ ಅಯ್ಯಪ್ಪ, ಮಲೆಯಂಡ ಕುಟ್ಟಪ್ಪ, ಅಪುö್ಪಮಣಿಯಂಡ ಬನ್ಸಿ ಭೀಮಯ್ಯ, ಮಲೆಯಂಡ ಈರಪ್ಪ, ಮಲೆಯಂಡ ಎಂ.ವಿಜು ಅಪ್ಪಚ್ಚ, ಅಲ್ಲಾರಂಡ ಸತೀಶ್, ಕೋಟೆರ ಕಿರಣ್, ಮಲೆಯಂಡ ವಿಜು, ಬಾಳೆಯಡ ತಿಮ್ಮಯ್ಯ, ಅಪುö್ಪಮಣಿಯಂಡ ಕಿಶು ಮೇದಪ್ಪ, ಮಣವಟ್ಟೀರ ಎಂ.ಪಾಪು, ಮಂಡೀರ ನಂಜಪ್ಪ, ಚಿಯಕಪೂವಂಡ ನವೀನ್ ನಾಚಪ್ಪ, ಮಲೆಯಂಡ ಕೌಶಿಕ್, ಚಿಯಕಪೂವಂಡ ಸುಜಾ ಪೆಮ್ಮಯ್ಯ, ನಾಪನೆರವಂಡ ಬಸಪ್ಪ, ಚಿಯಕಪೂವಂಡ ಉಮೇಶ್, ಮಲೆಯಂಡ ಅಯ್ಯಪ್ಪ, ದೇವತಕ್ಕ ನಾಪನೆರವಂಡ ಪೊನ್ನಪ್ಪ, ನೆಲಜಿ ನಾಡ್ ತಕ್ಕ ಬದ್ದಂಜೆಟ್ಟಿರ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್ ಮತ್ತಿತರರು ಪಾದಯಾತ್ರೆ ಹಾಗೂ ಜನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡಿದ್ದರು.