ಗೋಣಿಕೊಪ್ಪ ವರದಿ, ನ. ೧೨: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಮೂರನೇ ದಿನದ ಪಂದ್ಯದಲ್ಲಿ ಮೂರು ಪಂದ್ಯಗಳು ರೋಚಕ ಡ್ರಾದಲ್ಲಿ ಅಂತ್ಯಗೊAಡವು.
ಬ್ಲೂಸ್ಟಾರ್ ಸೋಮವಾರಪೇಟೆ ಹಾಗೂ ಡ್ರಬ್ರ್ಸ್ ಹೆಂಪ್ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ೨-೨ ಗೋಲುಗಳ ಅಂತರದಲ್ಲಿ ಡ್ರಾಗೊಂಡಿತು. ಸೋಮವಾರಪೇಟೆ ತಂಡದ ಸಮರ್ಥ್, ಪ್ರಸಾದ್, ಹೆಂಪ್ ತಂಡದ ಚಿಣ್ಣಪ್ಪ ಗೋಲು ಹೊಡೆದರು. ಕೊಡವ ಸಮಾಜದ ಮತ್ತು ಬಿಬಿಸಿ ತಂಡಗಳ ನಡುವಿನ ಪಂದ್ಯ ಗೋಲಿಲ್ಲದೆ ಡ್ರಾ ಫಲಿತಾಂಶ ಕಂಡಿತು. ಸೋಮವಾರಪೇಟೆ ಡಾಲ್ಪಿನ್ಸ್ ಹಾಗೂ ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವಿನ ಪಂದ್ಯ ಗೋಲು ದಾಖಲೆ ಇಲ್ಲದೆ ಡ್ರಾ ಫಲಿತಾಂಶ ಕಂಡಿತು.
ಬೇರಳಿನಾಡ್ ತಂಡವು ಕಿರುಗೂರು ವಿರುದ್ಧ ೩-೦ ಗೋಲುಗಳ ಜಯ ಸಾಧನೆ ಮಾಡಿತು. ಮುತ್ತಪ್ಪ, ವಿನೇಶ್, ಉತ್ತಪ್ಪ ಗೋಲು ಹೊಡೆದರು.
ಕಕ್ಕಬ್ಬೆ ಮಲ್ಮ ತಂಡವು ಬ್ಲೂಸ್ಟಾರ್ ಪೊದ್ದಮಾನಿ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಮಲ್ಮ ಆಟಗಾರರಾದ ಗೌತಂ, ಫಾಹದ್, ಕಾವೇರಪ್ಪ, ಪೊದ್ದಮನಿ ತಂಡದ ಪಿ. ಟಿ. ಅಯ್ಯಪ್ಪ ೨ ಗೋಲು ಬಾರಿಸಿದರು.