ಗೋಣಿಕೊಪ್ಪಲು, ನ. ೧೨: ಶಾಲಾ ಶಿಕ್ಷಣದಲ್ಲಿ ಪ್ರಾಣಿ ಸಂಕುಲದ, ಪರಿಸರದ ಹಾಗೂ ವನ್ಯ ಜೀವಿಗಳ ಬಗ್ಗೆ ಹೆಚ್ಚಿನ ವಿಷಯಗಳು ಅಳವಡಿಕೆಯಾಗಬೇಕು, ಪರಿಸರದ ನಡುವೆ ವಿದ್ಯಾರ್ಥಿಗಳಿಗೆ ಅಧ್ಯಯನ ಶಿಬಿರಗಳು ಆಗಿಂದ್ದಾಗಿಯೇ ನಡೆಯಬೇಕು. ಇದರಿಂದ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮೂಡಲು ಸಾಧ್ಯವಾಗಲಿದೆ ಎಂದು ಸಮಾಜ ಸೇವಕ, ಪರಿಸರಪ್ರೇಮಿ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆಯ ಜೆ.ಪಿ.ಎನ್. ಎಂ. ಪ್ರೌಢಶಾಲೆಯಲ್ಲಿ ವೀರಾಜಪೇಟೆ ವಲಯದ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಹಕ್ಕಿ ಹಬ್ಬ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಪಕ್ಷಿಗಳು ಪರಿಸರಕ್ಕೆ ವಿಶೇಷವಾದ ಕೊಡುಗೆ ನೀಡಿದೆ. ಪಕ್ಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾ ಹಂತ ದಲ್ಲಿಯೇ ಅಪಾರ ಜ್ಞಾನ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಪಠ್ಯ ಪುಸ್ತಕದಲ್ಲಿ ಪಕ್ಷಿಗಳ ಕುರಿತು ಹೆಚ್ಚಿನ ವಿಷಯಗಳು ಸಿಗುವಂತಾಗಲು ಕ್ರಮ ವಹಿಸಬೇಕು. ಅಲ್ಲದೆ, ಪರಿಸರದ ನಡುವೆ ವಿದ್ಯಾರ್ಥಿಗಳನ್ನು ಆಗಿಂದ್ದಾಗ್ಗೆ ಕರೆದೊಯ್ದು ಹೆಚ್ಚಿನ ಆಸಕ್ತಿ ಮೂಡಿಸುವಂತೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಪಕ್ಷಿಗಳ ಕೊಡುಗೆ ಬಗ್ಗೆ ಅಪಾರ ಜ್ಞಾನ ಸಿಗುವಂತಾಗಲಿದೆ ಎಂದರು. ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟಿçÃಯ ಹಕ್ಕಿ ಹಬ್ಬದಲ್ಲಿ ವಿಷಯ ತಜ್ಞರಾಗಿ ಆಗಮಿಸಿದ ಗೋಣಿಕೊಪ್ಪ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಪಕ್ಷಿ ತಜ್ಞ ಕೃಷ್ಣಚೈತನ್ಯ ಪರಿಸರಕ್ಕೆ ಪಕ್ಷಿ ಸಂಕುಲಗಳ ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಪ್ರಾಣಿ ಪಕ್ಷಿಗಳ ಕೊಡುಗೆ ಬಗ್ಗೆ ಸ್ಲೆöÊಡ್ಸ್ ಶೋ ಮೂಲಕ ವಿದ್ಯಾರ್ಥಿಗಳಿಗೆ ಅರಿವಿಕೆ ನೀಡಲಾಯಿತು.
ಜೆ.ಪಿ.ಎನ್.ಎಂ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್. ಲಾಲ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ರಾಷ್ಟಿçÃಯ ಹಕ್ಕಿ ಹಬ್ಬದ ವಿಚಾರವಾಗಿ ತಿಳಿಸಿದರು. ಉಪವಲಯ ಅರಣ್ಯ ಅಧಿಕಾರಿ ಮೋನಿಷ, ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಾಪಕವೃಂದ ಸಾಯಿಶಂಕರ್ ವಿದ್ಯಾ ಸಂಸ್ಥೆಯ ಬಿಎಡ್ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.