ವೀರಾಜಪೇಟೆ, ನ. ೧೨: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಶಾಲಾ ಕ್ರೀಡಾ ಸಮಿತಿ ವತಿಯಿಂದ ಕಂಡAಗಾಲ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೇರಳಿನಾಡು, ಕುತ್ತುನಾಡು, ಬೊಟ್ಯತ್‌ನಾಡಿನಲ್ಲಿ ಐನ್‌ಮನೆ ಹೊಂದಿರುವ ಕುಟುಂಬಗಳಿಗೆ ಡಿಸೆಂಬರ್ ೧೪ ರಿಂದ ೧೭ ರವರೆಗೆ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪೨ ವರ್ಷಗಳಿಂದ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಗುತಿತ್ತು. ಕಳೆದ ೨ ವರ್ಷದಿಂದ ಹಾಕಿ ಪಂದ್ಯಾಟಕ್ಕೆ ಒತ್ತು ನೀಡಲಾಗುತ್ತಿದೆ. ಕಳೆದ ಬಾರಿ ಬೇರಳಿನಾಡು ಮತ್ತು ಕುತ್ತುನಾಡುಗಳಲ್ಲಿರುವ ಐನ್‌ಮನೆಗಳ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿ ಬೊಟ್ಯತ್‌ನಾಡಿನಲ್ಲಿರುವ ಐನ್‌ಮನೆ ತಂಡಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ಐನ್‌ಮನೆ ತಂಡದಲ್ಲಿ ಜಾತಿ, ಮತ, ಭೇದ ಇಲ್ಲದೆ ಐದು ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕಾರ್ಯದರ್ಶಿ ಮುಲ್ಲೆಂಗಡ ಸುರೇಶ್ ಭೀಮಯ್ಯ ಮಾತನಾಡಿ, ಕಳೆದ ಬಾರಿ ೧೪ ಐನ್‌ಮನೆ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಈ ಬಾರಿ ೨೫ ತಂಡಗಳು ಪಾಲ್ಗೊಳ್ಳುವ ಸಾಧÀ್ಯತೆ ಇದೆ. ೧೭ ರಂದು ಪೂರ್ವಾಹ್ನ ೦.೨೨ ಬಂದೂಕಿನಿAದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಅವಕಾಶವನ್ನು ನೀಡಲಾಗಿದೆ. ಹಾಕಿ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆದ ವಿಜೇತರಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಹಾಕಿ ಪಂದ್ಯಾಟಕ್ಕೆ ಹೆಸರು ನೋಂದಾಯಿಸಿ ಕೊಳ್ಳಲು ತಾ. ೩೦ ಕೊನೆಯ ದಿನವಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸದಸ್ಯರಾದ ಚಂದುರ ಜಿ. ಬೋಪಣ್ಣ, ಅಟ್ರಂಗಡ ಕುಟ್ಟಪ್ಪ, ಬಲ್ಲಡಿಚಂಡ ಸೀತಮ್ಮ ಉಪಸ್ಥಿತರಿದ್ದರು.