ವೀರಾಜಪೇಟೆ, ನ. ೧೨: ಸಮಾಜದಲ್ಲಿ ದುರ್ಬಲ ವರ್ಗದವರಿಗೂ ಉಚಿತ ಕಾನೂನಿನ ಸೌಲಭ್ಯಗಳು ದೊರಕುವಂತೆ ಮಾಡುವುದೇ ಕಾನೂನು ಸೇವೆಗಳ ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಮಂಜುನಾಥ್ ಹೇಳಿದರು.
ರಾಷ್ಟಿçÃಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಾಷ್ಟಿçÃಯ ಕಾನೂನು ಸೇವೆಗಳ ದಿನಾಚರಣೆ ೧೯೯೫ ರಲ್ಲಿ ಜಾರಿಗೆ ಬಂದು ಅಂದಿನಿAದ ಎಲ್ಲಾ ಕಟ್ಟಕಡೆಯ ಜನರಿಗೂ ಉಚಿತ ಕಾನೂನು ಸೌಲಭ್ಯಗಳು ದೊರಕುತ್ತಿದ್ದು ಪ್ರತಿಯೊಬ್ಬರು ಉಚಿತ ಕಾನೂನಿನ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು, ನ್ಯಾಯಾಧೀಶ ಮಂಜುನಾಥ್ ಅವರು ನ್ಯಾಯಾಲಯದಲ್ಲಿರುವ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇಥ್ಯರ್ತಗೊಳ್ಳು ವಂತಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಗ್ರಾಮೀಣ ಪ್ರದೇಶದ ಜನರಿಗೂ ಉಚಿತ ಕಾನೂನಿನ ಅರಿವು ಕಾರ್ಯಕ್ರಮವನ್ನು ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂತೋಷ ಕೊಠಾರಿ, ಅಪರ ಸಿವಿಲ್ ನ್ಯಾಯಾಧೀಶರಾದ ಪ್ರದೀಪ ಪೋತದಾರ ಮಾತನಾಡಿದರು.
ಹಿರಿಯ ವಕೀಲರಾದ ಎನ್.ಜಿ. ಕಾಮತ್, ಎಂ.ಎA. ನಂಜಪ್ಪ, ಕೆ. ಪೂವಣ್ಣ, ಅವರುಗಳು ಮಾತನಾಡಿ, ಪ್ರತಿಯೋಬ್ಬರು ಉಚಿತ ಕಾನೂನು ಸೌಲಭ್ಯ ಪಡೆದುಕೊಳ್ಳುವಂತೆ ಹೇಳಿದರು.
ಈ ಸಂದರ್ಭ ನ್ಯಾಯಾಲಯದ ಸಿಬ್ಬಂದಿ ಎಸ್.ಬಿ. ಮಂಜುನಾಥ್, ವಕೀಲರಾದ ಸಿಂಧೂರ ಎನ್.ಸ್ವಾಮಿ, ಹಾಜೀರಾ ಶರೀಫ್ ಸೇರಿದಂತೆ ಇತರರು ಹಾಜರಿದ್ದರು.