ಕೋವರ್ ಕೊಲ್ಲಿ ಇಂದ್ರೇಶ್
ನವದೆಹಲಿ, ನ. ೧೦ : ೨೦೦೮ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ವಶಪಡಿಸಿಕೊಂಡ ಸಾಕ್ಷಿಗಳಾದ ಡಿಜಿಟಲ್ ಸಾಧನಗಳನ್ನು ಮರುಪರಿಶೀಲಿಸಲು ಕೋರಿದ್ದ ಕರ್ನಾಟಕ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ ಪುರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು, ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆಯಿಂದ ಒಬ್ಬರಿಗೆ ನ್ಯಾಯ ಸಿಗಬೇಕು ಎಂದು ಹೇಳಿದೆ. ೨೦೦೮ರ ಜುಲೈ ೨೫ ರಂದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು.
ಈ ಪ್ರಕರಣದಲ್ಲಿ ಸ್ಫೋಟ ನಡೆಸಿದ ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂಬುವವರನ್ನು ಪೊಲೀಸರು ಸುಲ್ತಾನಪಾಳ್ಯದ ಕನಕನಗರದಲ್ಲಿ ಬಂಧಿಸಿದ್ದರು. ಈ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ತಡಿಯಂಟವಿಡೆ ನಸೀರ್ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಶುಂಠಿ ಬೆಳೆಯುವ ಸೋಗಿನಲ್ಲಿ ಆಶ್ರಯ ಪಡೆದುಕೊಂಡು ವಿಧ್ವಂಸಕ ಕೃತ್ಯಕ್ಕೆ ನಿರ್ದೇಶನ ನೀಡುತಿದ್ದ. ಲಷ್ಕರ್ ಏ ತೋಯ್ಬಾದ ದಕ್ಷಿಣ ಭಾರತ ಕಮಾಂಡರ್ ಆಗಿದ್ದ ಇವನನ್ನು ಬಾಂಗ್ಲಾ ದೇಶಕ್ಕೆ ನುಸುಳಲು ಪ್ರಯತ್ನಿಸುತಿದ್ದಾಗ ಇವನ ಸಹಚರನ ಜತೆ ಮೇಘಾಲಯದ ಗಡಿಯಲ್ಲಿ ೨೦೦೯ ರಲ್ಲಿ ಗಡಿ ಭದ್ರತಾ ಪಡೆಯ ಯೋಧರು ಬಂಧಿಸಿದ್ದರು. ಇವನು ನೀಡಿದ ಸುಳಿವಿನ ಮೇರೆಗೆ ಕೇರಳದ ಪಿಡಿಪಿ ಪಕ್ಷದ ನಾಯಕ ಅಬ್ದುಲ್ ನಾಸರ್ ಮದನಿಯನ್ನೂ ಈ ಸ್ಫೋಟದಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ ಬಂಧಿಸಲಾಗಿತ್ತು.
ಬೆAಗಳೂರಿನಲ್ಲಿ ಬಂಧಿತರಾದವರಿAದ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ೩ ಪೆನ್ ಡ್ರೈವ್, ೫ ಫ್ಲಾಪಿಗಳು, ೧೩ ಸಿಡಿಗಳು, ೬ ಸಿಮ್ ಕಾರ್ಡ್ಗಳು, ೩ ಮೊಬೈಲ್ ಫೋನ್ಗಳು, ಎಲೆಕ್ಟಾçನಿಕ್ ಸಾಧನಗಳು, ಒಂದು ಮೆಮೊರಿ ಕಾರ್ಡ್ ಮತ್ತು ೨ ಡಿಜಿಟಲ್ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ಹೈದರಾಬಾದ್ನ ಸಿಎಫ್ಎಸ್ಎಲ್ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ನವೆಂಬರ್ ೨೯, ೨೦೧೦ ರಂದು ಇದರ ವರದಿಯನ್ನು ಸ್ವೀಕರಿಸಲಾಯಿತು. ಅದನ್ನು ಅಕ್ಟೋಬರ್ ೧೬, ೨೦೧೨ ರಂದು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ತಮ್ಮ ವಿರುದ್ಧ ಸಲ್ಲಿಕೆಯಾಗಿದ್ದ ಸಾಕ್ಷಾö್ಯಧಾರಗಳ ಕ್ರಮ ಬದ್ಧತೆಯನ್ನು ಪ್ರಶ್ನಿಸಿ ಆರೋಪಿಗಳು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು.
ನಂತರ ತಮ್ಮ ವಿರುದ್ಧ ಸಲ್ಲಿಕೆಯಾಗಿದ್ದ ಸಾಕ್ಷಾö್ಯಧಾರಗಳನ್ನು ಪ್ರಶ್ನಿಸಿ ಆರೋಪಿಗಳು ಮಾರ್ಚ್ ೬, ೨೦೧೭ ರಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಇವನ್ನು ತಳ್ಳಿ ಹಾಕುವಂತೆ ಕೋರಿದ್ದರು. ಆದರೆ ಪ್ರಾಸಿಕ್ಯೂಷನ್ ಆರೋಪಗಳನ್ನು ಧೃಢಪಡಿಸಲು ಇವು ಬಲವಾದ ಸಾಕ್ಷö್ಯಗಳಾಗಿದ್ದು ಇವುಗಳನ್ನು ಪರಿಗಣಿಸಿ ವಿಚಾರಣೆ ನಡೆಸುವಂತೆ ಕೋರಿತ್ತು. ಭಾರತೀಯ ಸಾಕ್ಷö್ಯ ಕಾಯ್ದೆಯ ಸೆಕ್ಷನ್ ೬೫ - ಬಿ ಅಡಿ ಪ್ರಮಾಣಪತ್ರವಿಲ್ಲದೇ, ಡಿಜಿಟಲ್ ಸಾಕ್ಷö್ಯಗಳ ಕುರಿತ ವರದಿಯನ್ನು ಸಾಕ್ಷö್ಯವಾಗಿ ತೆಗೆದುಕೊಳ್ಳುವುದನ್ನು ಆರೋಪಿಗಳ ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು. ಸಾಕ್ಷö್ಯವನ್ನು ಪುಷ್ಟೀಕರಿಸುವ ಪ್ರಮಾಣ ಪತ್ರವನ್ನು ಸಾಕ್ಷö್ಯ ಕಾಯಿದೆಯ ಸೆಕ್ಷನ್ ೬೫-ಬಿ ಅಡಿ ಪ್ರಸ್ತುತಪಡಿಸಲು ಕೋರಿರುವುದು ಪ್ರಮುಖ ಸಾಕ್ಷö್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ವಶಪಡಿಸಿಕೊಂಡ ಎಲೆಕ್ಟಾçನಿಕ್ ಸಾಧನಗಳಿಗೆ ಸಂಬAಧಿಸಿದ ಪ್ರಮಾಣಪತ್ರವನ್ನು ಭಾರತೀಯ ಸಾಕ್ಷö್ಯ ಕಾಯ್ದೆಯ ಸೆಕ್ಷನ್ ೬೫ ಬಿ ಅಡಿಯಲ್ಲಿ ಹಾಜರುಪಡಿಸಲು ಪ್ರಾಸಿಕ್ಯೂಷನ್ಗೆ ಸೂಚಿಸಿತು.
ಪ್ರಮಾಣ ಪತ್ರವನ್ನು ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮೂಲಕ ಆರೋಪಿಗಳಿಗೆ ತಮ್ಮ ಹೇಳಿಕೆಗಳನ್ನು ಬದಲಾಯಿಸಲು ಅನುವು ಮಾಡಿಕೊಡುವುದಿಲ್ಲ . ಪ್ರಾಸಿಕ್ಯೂಷನ್ ನೇತೃತ್ವದ ಸಾಕ್ಷö್ಯವನ್ನು ನಿರಾಕರಿಸಲು ಆರೋಪಿಗೆ ಸಂಪೂರ್ಣ ಅವಕಾಶವಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಇದಕ್ಕಾಗಿಯೇ ಸಿಆರ್ಪಿಸಿ ಸೆಕ್ಷನ್ ೩೧೧ ಇದ್ದು ಕೋರ್ಟ್ ಅನುಮತಿ ನೀಡಿರುವ ಉದ್ದೇಶವು ಸತ್ಯವನ್ನು ಹೊರತರುವುದಾಗಿದೆ ಎಂದು ಹೇಳಿದ್ದು ನ್ಯಾಯಯುತ ವಿಚಾರಣೆಯ ಉದ್ದೇಶವು ಯಾವುದೇ ನಿರಪರಾಧಿಗಳಿಗೆ ಮತ್ತು ಮುಗ್ಧರಿಗೆ ಶಿಕ್ಷೆಯಾಗಬಾರದು ಎಂದು ಹೇಳಿದೆ.