ಮಡಿಕೇರಿ, ನ. ೧೦: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಅಕ್ರಮ ಸಕ್ರಮ ಯೋಜನೆ ಕುರಿತು ರಾಜ್ಯ ಸರಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್‌ಸೆಟ್‌ಅನ್ನು ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಒದಗಿಸುವ ಸಹಾಯಧನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಅಕ್ರಮ ಸಕ್ರಮ ಯೋಜನೆ ಕುರಿತು ರಾಜ್ಯ ಸರಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್‌ಸೆಟ್‌ಅನ್ನು ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಒದಗಿಸುವ ಸಹಾಯಧನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.

ಹೊಸ ಆದೇಶದ ಪ್ರಕಾರ ಇನ್ನು ಮುಂದೆ ರಾಜ್ಯದ ಎಲ್ಲಾ ಎಸ್ಕಾಂ ವತಿಯಿಂದ ವಿದ್ಯುತ್ ಜಾಲದಿಂದ ೫೦೦ ಮೀಟರ್‌ಗಿಂತ ಸಮೀಪದಲ್ಲಿರುವ ಕೃಷಿ ಪಂಪ್‌ಸೆಟ್‌ಗಳಿಗೆ ನೇರವಾಗಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಿದೆ, ಇದಕ್ಕಿಂತ ಹೆಚ್ಚಿಗೆ ಅಂದರೆ ೫೦೦ ಮೀಟರ್‌ಗಿಂತ ದೂರದ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಇಂಧನ ಇಲಾಖೆಯ ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಸೋಲಾರ್ ಚಾಲಿತ ಪಂಪ್‌ಸೆಟ್ ಅಳವಡಿಸಲು ಕೇಂದ್ರ ಸರ್ಕಾರ ಶೇ. ೩೦ ರಷ್ಟು ಸಹಾಯಧನ ನೀಡುತಿತ್ತು. ಇದಕ್ಕೆ ರಾಜ್ಯ ಸರ್ಕಾರವು ಹೆಚ್ಚುವರಿ ಶೇ. ೩೦ ಸಹಾಯಧನ ನೀಡುತಿತ್ತು ಈಗ ಈ ಸಹಾಯಧನ ಮೊತ್ತವನ್ನು ಶೇ. ೫೦ಕ್ಕೆ ಹೆಚ್ಚಳ ಮಾಡಲಾಗಿದ್ದು, ಉಳಿದ ಶೇ. ೨೦ರಷ್ಟು ಮೊತ್ತವನ್ನು ರೈತರು ಭರಿಸಬೇಕಿದೆ. ವಿದ್ಯುತ್ ಸಂಪರ್ಕಕ್ಕೆ ರೈತರು ಈಗಾಗಲೇ ಪಾವತಿಸಿದ ಮೊತ್ತವನ್ನು ಅವರ ಪಾಲಿನ ವಂತಿಗೆಯಾಗಿ ಪರಿಗಣಿಸುವಂತೆ ಇಂಧನ ಇಲಾಖೆ ತಿಳಿಸಿದೆ.

ಸೌರ ವಿದ್ಯುತ್ ಚಾಲಿತ ಪಂಪ್‌ಸೆಟ್ ಅಳವಡಿಸಿದ ನಂತರ ಅಂತಹ ರೈತರು ವಿದ್ಯುತ್ ಜಾಲದಿಂದ ಪಡೆದ ಸಂಪರ್ಕವನ್ನು ಕಡಿತಗೊಳಿಸಬೇಕು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ೧೦ ಹೆಚ್.ಪಿ.ವರೆಗಿನ ಸೌರ ವಿದ್ಯುತ್ ಚಾಲಿತ ಪಂಪ್‌ಸೆಟ್ ಅಳವಡಿಸಬಹುದು. ಆದರೆ ೭.೫ ಹೆ.ಪಿ.ವರೆಗೆ ಮಾತ್ರ ಸಹಾಯಧನ ಸೀಮಿತವಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಆದೇಶದ ವಿವರ ಹೀಗಿದೆ

ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆಯ ನಂತರ, ಈ ಹಿಂದೆ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪದ್ಧತಿಯನ್ನು ಕೂಡಲೇ ಬದಲಿಸಿ, ಹೊಸದಾಗಿ ಪದ್ಧತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿತು. ಅದರಂತೆ ಈ ಕೆಳಕಂಡAತೆ ಆದೇಶಿಸಿದೆ.

ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಲು ಮತ್ತು ಸೌರ ವಿದ್ಯುತ್ತನ್ನು ಸಮರ್ಪಕವಾಗಿ ಬಳಸಲು sಣಚಿಟಿಜ-ಚಿಟoಟಿe - oಜಿಜಿ gಡಿiಜ ಸೋಲಾರ್ ಪಂಪ್‌ಸೆಟ್‌ಗಳನ್ನು ಹಾಗೂ IP seಣ ಫೀಡರ್‌ಗಳ ಸೌರೀಕರಣವನ್ನು ಅನುಷ್ಠಾನಗೊಳಿಸಿ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್ ಸೌಕರ್ಯ ಕಲ್ಪಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.

(೧) ವಿದ್ಯುತ್ ಸರಬರಾಜು ಕಂಪೆನಿಗಳು ೨೦೧೫ ರಿಂದ ಈಚೆಗೆ IP ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ರಚಿಸಲು ಕೈಗೊಂಡಿರುವ ಕ್ರಮಕ್ಕಾಗಿ ಘಟನೋತ್ತರ ಅನುಮೋದನೆ ನೀಡಿದೆ.

(೨) ವಿದ್ಯುತ್ ಸರಬರಾಜು ಕಂಪೆನಿಗಳು ೨೦೧೫ ರಿಂದ ಈಚೆಗೆ ಬಂಡವಾಳ ವೆಚ್ಚದಲ್ಲಿ ಸಕ್ರಮಗೊಂಡ-ಸಾಮಾನ್ಯ IP ಸೆಟ್‌ಗಳಿಗೆ ವಿದ್ಯುತ್ ಮೂಲಸೌಕರ್ಯ ಕಲ್ಪಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಿದೆ.

(೩) ವಿದ್ಯುತ್ ಸರಬರಾಜು ಕಂಪೆನಿಗಳು ಸಕ್ರಮಗೊಳಿಸಿದ ಕೃಷಿ ಪಂಪ್‌ಸೆಟ್‌ಗಳಿಗೆ ೨೦೨೨-೨೩ ಮತ್ತು ೨೦೨೩-೨೪ ರಲ್ಲಿ ಟೆಂಡರ್ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಟೆಂಡರ್ ಕರೆಯಲಾದ ಅಂದಾಜು ಪಟ್ಟಿಯನ್ನು ಪುನರ್ ಪರಿಶೀಲಿಸಿ, ಪಂಪ್‌ಸೆಟ್‌ಗಳು ಹಾಲಿ ಇರುವ ವಿದ್ಯುತ್ ಜಾಲದಿಂದ ೫೦೦ ಮೀಟರ್‌ಯಿಂದಾಚೆಯಿದ್ದಲ್ಲಿ ಕ್ರಮಸಂಖ್ಯೆ (೫) ರಂತ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು ೫೦೦ ಮೀಟರ್ ಒಳಗಿರುವ ಪಂಪ್‌ಸೆಟ್‌ಗಳಿಗೆ ಕನಿಷ್ಟ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಗೊಳಿಸಲು ಕ್ರಮವಹಿಸುವುದು.

(೪) ದಿನಾಂಕ ೨೨.೯.೨೦೨೩ ರೊಳಗೆ ನೋಂದಾಯಿಸಲ್ಪಟ್ಟ IP seಣ ಸಂಖ್ಯೆಗಳನ್ನು ಕೂಡಲೇ ಧೃಡಪಡಿಸಿಕೊಂಡು ಟೆಂಡರ್ ಕರೆಯಬೇಕಾದ ಕಾಮಗಾರಿಗಳನ್ನು ನಿಯಮಾನುಸಾರ ಕ್ರಮವಹಿಸಲು ಅನುಮೋದಿಸಿದೆ.

(೫) ಈಗಾಗಲೇ ನೋಂದಣಿಗೊAಡು ಮೂಲಸೌಕರ್ಯ ರಚನೆಗೆ ಕಾಯುತ್ತಿರುವ ಅಥವಾ ಹೊಸದಾಗಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳು, ವಿದ್ಯುತ್ ಜಾಲದಿಂದ ೫೦೦ಮೀಟರ್‌ಯಿಂದಾಚೆ ಇದ್ದಲ್ಲಿ, sಣಚಿಟಿಜ-ಚಿಟoಟಿe/oಜಿಜಿ-gಡಿiಜ soಟಚಿಡಿ ಪಂಪ್‌ಸೆಟ್ ಅಳವಡಿಸಲು ಸೂಚಿಸಿದೆ. ಸೌರ ಪಂಪ್‌ಸೆಟ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಶೇ. ೩೦ ರಷ್ಟು ಸಹಾಯಧನ ಅಲ್ಲದ ರಾಜ್ಯ ಸರ್ಕಾರದಿಂದ ಶೇ. ೩೦ ರಷ್ಟು ಇರುವ ಸಹಾಯಧನವನ್ನು ಶೇ. ೫೦ಕ್ಕೆ ಹೆಚ್ಚಿಸಿ ಸರ್ಕಾರ ಅನುಮೋದಿಸಿದೆ. ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಮೊತ್ತವನ್ನು ಪಾವತಿಸಿದರೆ, ಪಾವತಿಸಿದ ಮೊತ್ತವನ್ನು ರೈತರ ವಂತಿಗೆ ಎಂದು ಪರಿಗಣಿಸಿ, ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸುವುದು.

(೬) Sಣಚಿಟಿಜ-ಚಿಟoಟಿe/oಜಿಜಿ-gಡಿiಜ soಟಚಿಡಿ ಪಂಪ್‌ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ ೧೦ ಊP ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಆದಾಗ್ಯೂ ಒಓಖಇ ಷರತ್ತುಗಳ ಪ್ರಕಾರ ೭.೫ ಊP ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ-ಅನುದಾನವು ಸೀಮಿತವಾಗಿರುತ್ತದೆ.

(೭) ರೈತರು Sಣಚಿಟಿಜ-ಚಿಟoಟಿe/oಜಿಜಿ-gಡಿiಜ soಟಚಿಡಿ ಪಂಪ್‌ಸೆಟ್ ಅಳವಡಿಸಿಕೊಂಡ ನಂತರ, ಅಂತಹ ಪಂಪ್ ಸೆಟ್‌ಗಳನ್ನು ಉಖIಆ PಔWಇಖ ಜಾಲದ ಸಂಪರ್ಕದಿAದ ಕಡಿತಗೊಳಿಸಲು ಎಲ್ಲಾ ಇSಅಔಒಗಳು ಕ್ರಮವಹಿಸುವುದು.

(೮) ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಸಬ್‌ಸ್ಟೇಷನ್‌ನ ಬಳಿ ಖಇSಅಔ ಮಾದರಿಯಡಿಯಲ್ಲಿ ಏUSUಒ-ಅ ಪುಕಾರ ಫೀಡರ್ ಸೌರೀಕರಣ ಅನುಷ್ಠಾನಗೊಳಿಸುವುದು.

(೯) ಏಇಖಅ ನೀಡಿರುವ ಕಾಲಮಿತಿಯೊಳಗೆ ಎಲ್ಲಾ IP ಸೆಟ್ ಗಳನ್ನು ಎಣಿಕೆ ಮಾಡಿ ಅವುಗಳನ್ನು ಆಯಾ ರೈತರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ಇSಅಔಒಗಳು ಅಗತ್ಯ ಕ್ರಮ ತೆಗೆದುಕೊಂಡು ಪೂರ್ಣಗೊಳಿಸುವುದು.

(೧೦) ದಿನಾಂಕ: ೨೨.೯.೨೦೨೩ರ ನಂತರ ನೋಂದಾಯಿಸಲ್ಪಡುವ IP ಸೆಟ್‌ಗಳಿಗೆ ಮೂಲಸೌಕರ್ಯವನ್ನು ರೈತರು ಸ್ವಯಂ-ಕಾರ್ಯನಿರ್ವಹಣೆಯಡಿ' (seಟಜಿ- exeಛಿuಣioಟಿ) ರಚಿಸಿಕೊಳ್ಳತಕ್ಕದ್ದು.

ನೀರಾವರಿ ಪಂಪ್‌ಸೆಟ್‌ಗಳ ಬಗ್ಗೆ, ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.