ಐಗೂರು, ನ. ೧೦: ಗದ್ದೆಗಳಲ್ಲಿ ನಾಟಿ ಮಾಡಿ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಇನ್ನೇನು ಬೆಳೆಗಳು ಕೈಗೆಟ್ಟುವ ಸಮಯದಲ್ಲಿ ಕಾಡಾನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.

ಐಗೂರು ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ಭಾಗದಲ್ಲಿ ನಿರಂತರ ಆನೆ ದಾಳಿಯಿಂದ ರೈತರು, ಜನರು ಪರಿತಪಿಸುತ್ತಿದ್ದು, ಬೆಳೆ ನಾಶದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗದ್ದೆಗಳಿಗೆ ಲಗ್ಗೆಯಿಟ್ಟ ಕಾಡಾನೆಗಳು ಬೆಳೆಯನ್ನು ನಾಶಪಡಿಸಿರುವುದರಿಂದ ಬೆಳನಷ್ಟಕ್ಕೆ ಒಳಗಾದ ರೈತರಾದ ಕೆ .ಪಿ .ರಾಯ್, ಭಾರನ ಮಾದಪ್ಪ ಮತ್ತು ಬಾರನ ಮಂಜು ಆನೆಗಳ ಹಾವಳಿಯನ್ನು ತಡೆಗಟ್ಟಲು ಅಗ್ರಹಿಸಿದ ಮೇರೆಗೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳಾದ ಚೇತನ್, ಉಪವಲಯ ಅರಣ್ಯ ಅಧಿಕಾರಿ ಜಗದೀಶ್ ಗಸ್ತು ಅರಣ್ಯಪಾಲಕರಾದ ಶ್ರೀಕಾಂತ್ ಮತ್ತು ಸದಾನಂದ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.