ಗೋಣಿಕೊಪ್ಪ ವರದಿ, ನ. ೧೦: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಆರಂಭಗೊAಡಿರುವ ಹಾಕಿ ಲೀಗ್ ಪಂದ್ಯಾಟದಲ್ಲಿ ೫ ತಂಡಗಳು ಗೆಲುವು ದಾಖಲಿಸಿದವು. ಒಂದು ಪಂದ್ಯ ಡ್ರಾದಲ್ಲಿ ಫಲಿತಾಂಶ ನೀಡಿತು.

ಕುಂದ ಬೊಟ್ಯತ್ನಾಡ್, ಫಾಲ್ಕನ್ ಕ್ಲಬ್, ಬೇಗೂರು, ಕಕ್ಕಬ್ಬೆ ಮಲ್ಮ, ಕಂಡAಗಾಲ ಬೇರಳಿನಾಡ್ ಗೆಲುವು ಪಡೆಯಿತು. ಕೋಣನಕಟ್ಟೆ ಮತ್ತು ಮಡಿಕೇರಿ ಚಾರ್ಮರ್ಸ್ ತಂಡಗಳು ಡ್ರಾದಲ್ಲಿ ತೃಪ್ತಿಪಟ್ಟುಕೊಂಡವು.

ಕುAದ ಬೊಟ್ಯತ್ನಾಡ್ ತಂಡವು ಪೊದ್ದಮಾನಿ ಬ್ಲೂಸ್ಟಾರ್ ತಂಡವನ್ನು ೬-೧ ಗೋಲುಗಳಿಂದ ಮಣಿಸಿತು. ಬೊಟ್ಯತ್ನಾಡ್ ಪರ ಮಯೂರ್, ಬೋಪಣ್ಣ, ಸುದೇಶ್, ಕೊಟ್ಟಂಗಡ ಬೋಪಣ್ಣ, ಅಮೋಘ್, ಪೊದ್ದಮಾನಿ ಆಟಗಾರ ಪ್ರಿನ್ಸ್ ಗೋಲು ಹೊಡೆದರು.

ಫಾಲ್ಕನ್ ಕ್ಲಬ್ ತಂಡವು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ೩-೦ ಗೋಲುಗಳಿಂದ ಜಯಿಸಿತು. ಕಾರ್ಯಪ್ಪ, ಚರಣ್ ಗೋಲು ಹೊಡೆದರು.

ಬೇಗೂರು ತಂಡವು ೯-೧ ಗೋಲುಗಳಿಂದ ವೀರಾಜಪೇಟೆ ಕೊಡವ ಸಮಾಜ ತಂಡವನ್ನು ಸೋಲಿಸಿತು. ಬೇಗೂರು ಪರ ಪೊನ್ನಣ್ಣ, ಜಗತ್, ಬೋಪಣ್ಣ, ಮಣಿ, ಅಯ್ಯಣ್ಣ, ಪೊನ್ನಪ್ಪ, ವೀರಾಜಪೇಟೆ ಪರ ಟೋನಿ ಗೋಲು ಹೊಡೆದರು.

ಕಕ್ಕಬ್ಬೆ ಮಲ್ಮ ತಂಡವು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯಿಸಿತು. ಅರ್ಜುನ್, ಫಾಹದ್ ಗೋಲು ಬಾರಿಸಿದರು.

ಕೋಣನಕಟ್ಟೆ ಮತ್ತು ಮಡಿಕೇರಿ ಚಾರ್ಮರ್ಸ್ ಪಂದ್ಯ ೧-೧ ಗೋಲುಗಳಿಂದ ಡ್ರಾ ಫಲಿತಾಂಶ ಬಂತು. ಕೋಣನಕಟ್ಟೆ ಆಟಗಾರ ಸೋಮಣ್ಣ, ಮಡಿಕೇರಿ ಆಟಗಾರ ಸುಜನ್ ಗೋಲು ಹೊಡೆದರು.

ಕಂಡAಗಾಲ ಬೇರಳಿನಾಡ್ ತಂಡಕ್ಕೆ ಮೂರ್ನಾಡ್ ಎಂಆರ್‌ಎಫ್ ವಿರುದ್ಧ ೨-೧ ಗೋಲುಗಳ ಜಯ ದೊರೆಯಿತು. ಬೇರಳಿನಾಡ್ ಆಟಗಾರ ವಿನೇಶ್, ಮೂರ್ನಾಡು ಆಟಗಾರ ಗಗನ್ ಗೋಲು ಹೊಡೆದರು.