ಗೋಣಿಕೊಪ್ಪ ವರದಿ, ನ. ೧೦: ಗೋಣಿಕೊಪ್ಪ ರೋಟರಿ ಕ್ಲಬ್, ರೋರ‍್ಯಾಕ್ಟ್ ಕ್ಲಬ್ ಆಫ್ ಹಳ್ಳಿಗಟ್ಟು, ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ರೋರ‍್ಯಾಕ್ಟ್ ಕ್ಲಬ್ ಆಫ್ ಪೊನ್ನಂಪೇಟೆ ಫಾರಸ್ಟಿçà ಕಾಲೇಜು ಮತ್ತು ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿ ಹಾಗೂ ರಿಲಾಯನ್ಸ್ ಸ್ಮಾರ್ಟ್ ಬಜಾರ್ ಕಾರ್ಯಕರ್ತರುಗಳ ಸಹಯೋಗದಲ್ಲಿ ಗೋಣಿಕೊಪ್ಪ-ಮೈಸೂರು ರಸ್ತೆಯ ಆನೆಚೌಕೂರು ಗಡಿವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.

ರಸ್ತೆಯ ಎರಡು ಬದಿಗಳಲ್ಲಿದ್ದ ಕಸ ಹೆಕ್ಕಲಾಯಿತು. ೩೦ ರೋಟರಿ ಸದಸ್ಯರು, ೫೦ ರೋರ‍್ಯಾಕ್ಟ್ ಸದಸ್ಯರು, ೧೫ ಡಿಫಾರೆಸ್ಟಿç ರೋಟ್ರಾಕ್ಟ್ ಸದಸ್ಯರು ಮತ್ತು ೧೦ ಸ್ಮಾರ್ಟ್ ಬಜಾರ್ ಸದಸ್ಯರು ಸೇರಿದಂತೆ ಸುಮಾರು ೧೦೦ ಸ್ವಯಂ ಸೇವಕರು ಅಭಿಯಾನದಲ್ಲಿ ತೊಡಗಿಸಿ ಕೊಂಡರು. ಸುಮಾರು ೫೫ ಚೀಲಗಳಷ್ಟು ಕಸ ಸಂಗ್ರಹಿಸಲಾಯಿತು. ಸಾನಿಟರಿ ನ್ಯಾಪ್ಕಿನ್, ಮದ್ಯದ ಬಾಟಲಿ, ಪ್ಲಾಸ್ಟಿಕ್ ಮತ್ತು ಮಕ್ಕಳ ನ್ಯಾಪ್ಕಿನ್ ಹೆಕ್ಕಿ ತೆಗೆಯಲಾಯಿತು.