ವೀರಾಜಪೇಟೆ, ನ. ೧೦: ಕೊಡಗಿನ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳು ಜನರಿಗೆ ದೊರಕುವಂತಾಗಬೇಕು. ಈ ಹಿನ್ನೆಲೆ ರಾಜಕೀಯ ರಹಿತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದ ಪಂದ್ಯAಡ ಕುಟುಂಬದ ಐನ್ಮನೆಯಲ್ಲಿ ನಡೆದ ಗುರುಕಾರಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಕಾಂಚನ ಪೊನ್ನಣ್ಣ ಅವರುಗಳಿಗೆ ಪಂದ್ಯAಡ ಕುಟುಂಬದಿAದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಪಂದ್ಯAಡ ಮನೆತನದವರ ಮನೆಗೆ ಹೋಗುವ ದಾರಿಗೆ ಕೊಡವ ಬುಡಕಟ್ಟು ಭಾಷೆಯ ಲಿಪಿಯಲ್ಲಿರುವ ನಾಮಫಲಕವನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ಪಂದ್ಯAಡ ಕುಟುಂಬದ ಅಧ್ಯಕ್ಷರು ಪಟ್ಟೆದಾರರಾದ ಪೆಮ್ಮಯ್ಯ, ಕುಟುಂಬದ ಕಾರ್ಯದರ್ಶಿ ಪಿ.ಎಂ. ಸರೋಜ, ಹಿರಿಯರಾದ ಪಿ.ಎಸ್. ಮಾದಪ್ಪ ರವಿ, ಪಿ.ಎಸ್. ಚಂಗಪ್ಪ, ಅನೀಲ್ ಕಾರ್ಯಪ್ಪ, ಪಿ.ಎನ್. ದಿನೇಶ್ ಹಾಗೂ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.