ಸ್ವಾತಂತ್ರö್ಯ ಹೋರಾಟಗಾರರೂ, ವಿದ್ವಾಂಸರೂ, ಹಿಂದೂ-ಮುಸ್ಲಿA ಸೌಹಾರ್ದತೆಯ ಏಕಮೇವಾದ್ವಿತೀಯ ಹರಿಕಾರರೂ ಆದ ಖ್ಯಾತ ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಂ ಅಜಾದ್ ಅವರು ಭಾರತೀಯ ಶಿಕ್ಷಣ ರಂಗದ ಪ್ರಮುಖ ವಾಸ್ತುಶಿಲ್ಪಿ. ಶಿಕ್ಷಣ ಕ್ಷೇತ್ರದಲ್ಲಿ ಅಜಾದ್ ಅವರ ಕೊಡುಗೆ ಯನ್ನು ಸ್ಮರಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನವೆಂಬರ್ ೧೧ನ್ನು ರಾಷ್ಟಿçÃಯ ಶಿಕ್ಷಣ ದಿನವೆಂದು ಆಚರಿಸು ವುದಾಗಿ ಘೋಷಣೆ ಮಾಡಿತು. ಸಮಾಜದ ಪರಿವರ್ತನೆಗೆ ಜನಸಾಮಾನ್ಯ ರನ್ನು ಪ್ರಬಲಗೊಳಿಸಲು ಶಿಕ್ಷಣವೇ ಪ್ರಮುಖ ಅಸ್ತç ಎಂಬ ದೃಢವಾದ ನಂಬಿಕೆಗೆ ಬದ್ಧರಾಗಿ ಶಿಕ್ಷಣ ಕ್ಷೇತ್ರದಲ್ಲಿ ತನ್ನ ನಿಲುವುಗಳನ್ನು ಸಾಬೀತುಪಡಿಸಿದ ಮಹಾನ್ ಶಿಕ್ಷಣಯೋಗಿ ಅಬುಲ್ ಕಲಂ ಅಜಾದ್ ಅವರು.
ವೇದಗಳ ಕಾಲದಿಂದಲೇ ಶಿಕ್ಷಣದ ಧ್ಯೇಯೋದ್ದೇಶಗಳು ಕಾಲಘಟ್ಟಕ್ಕೆ ಅನುಗುಣವಾಗಿ ಅನೇಕ ಮಾರ್ಪಾಡುಗಳಿಗೆ ಒಳಪಡುತ್ತ ಬಂದಿದೆ. ಮನುಷ್ಯನ ವರ್ತನೆಯಲ್ಲಿ ಕಾಲಾನುಗುಣವಾದ ಬದಲಾವಣೆ ತರುವುದು ನಿಜವಾದ ಕಲಿಕೆ ಎಂಬುದು ಮನಶಾಸ್ತçಜ್ಞರ ಮಾತು. ಇಲ್ಲಿ ಮಾನವನ ಅಸಂಬದ್ಧ ನಡವಳಿಕೆಯಲ್ಲಿ ಪರಿವರ್ತನೆ ತರುವ ಉದ್ದೇಶದಿಂದ ಮೌಲ್ಯಬದ್ಧತೆಯನ್ನು ಸಾಧನವಾಗಿಟ್ಟುಕೊಂಡು ಶಿಕ್ಷಣವನ್ನು ಪೂರೈಸಲಾಗುತ್ತಿತ್ತು. ಹಾಗಾಗಿ ಅಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳ ಪಾಲನೆಯೇ ಜನಸಾಮಾನ್ಯರ ಮೊದಲ ಆದ್ಯತೆ. ಇರುವುದರಲ್ಲಿಯೇ ತೃಪ್ತಿ, ಸ್ವಾರ್ಥ ರಹಿತ ಜೀವನ ಶೈಲಿ. ಹಾಗಾಗಿ ಎಲ್ಲರಿಗೂ ಅಪ್ಯಾಯಮಾನವಾದ ಬದುಕು ಆಗಿನದು. ಶಿಕ್ಷಣ ಕ್ಷೇತ್ರವೂ ಸೇರಿಕೊಂಡAತೆ ಆಧುನಿಕತೆ ಎನ್ನುವುದು ಮನುಷ್ಯನ ಬದುಕಿನ ಮೇಲೆ ಅದೆಷ್ಟು ಪರಿವರ್ತನೆಗೆ ಕಾರಣವಾಗಿಬಿಟ್ಟಿದೆ ಎಂದರೆ ಈಗ ‘ಸರ್ವಂ ವ್ಯವಹಾರಮಯಂ' ಎನ್ನುವಂತಾಗಿದೆ. ದೈವಿಕ ಭಾವನೆಗೆ ಸಾಕ್ಷಿಯಾಗಿದ್ದ ಗುರು ಶಿಷ್ಯರ ಬಾಂಧವ್ಯದಿAದ ಹಿಡಿದು ವಿದ್ಯಾದಾನದ ಮೂಲ ಉದ್ದೇಶವೂ ಕೂಡ ಮಂಕಾಗಿಬಿಟ್ಟಿದೆ. ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಮೂಢನಂಬಿಕೆಗಳಿAದ ಸಮಾಜದ ಸ್ವಾಸ್ಥö್ಯ ಹಾಳಾಗಿ ಹೋಗಿದ್ದ ಸಂದರ್ಭ ಆಗಿನ ಕಾಲಕ್ಕೆ ಶಿಕ್ಷಣದ ಉದ್ದೇಶ ಜನರಲ್ಲಿ ತಿಳುವಳಿಕೆ ಮತ್ತು ಜಾಗೃತಿಯನ್ನು ತರುವುದಾಗಿತ್ತು. ನಮ್ಮಲ್ಲಿದ್ದ ಅನೈಕ್ಯತೆ ಪರಕೀಯರ ಪ್ರವೇಶಕ್ಕೆ ಕಾರಣವಾಗಿದ್ದು ರಾಷ್ಟçಭಕ್ತಿಯ ಮೂಲಕ ಏಕತೆಗೆ ಶ್ರಮಿಸಿದ ಅಂದಿನ ಶಿಕ್ಷಣ ವ್ಯವಸ್ಥೆ ಅದೆಷ್ಟೋ ಆದರ್ಶ ಪ್ರಾಯ ವ್ಯಕ್ತಿತ್ವಗಳನ್ನೇ ಕೊಡುಗೆಯಾಗಿ ನೀಡಿದೆ.
ಚರಿತ್ರೆಯ ಸಾಧಕರನ್ನು, ಅವರ ಸಾಧನೆಯನ್ನು, ಬಾಲ್ಯದಿಂದ ಅವರ ಮೇಲೆ ಅಂದಿನ ಶಿಕ್ಷಣ, ಗುರುವೃಂದ ಬೀರಿದ ಅಗಾಧ ಪರಿಣಾಮವನ್ನು ಸೂಕ್ಷö್ಮ ಅವಲೋಕನದಿಂದ ನಾವು ಅರ್ಥೈಸಿಕೊಳ್ಳಬಹುದು.
ಜಗತ್ತು ತನ್ನ ಜ್ಞಾನದ ರೆಕ್ಕೆಗಳನ್ನು ಚಾಚುತ್ತಲೇ ಇಡೀ ವಿಶ್ವವನ್ನು ಅಂಗೈಯಲ್ಲಿಟ್ಟು ನೋಡುವ ಕಾಲಘಟ್ಟದಲ್ಲಿ ಇಂದು ಬದುಕು ಸಾಗುತ್ತಿದೆ. ಈಗಿನ ಪೀಳಿಗೆಗೆ ಶಿಕ್ಷಣದ ಉದ್ದೇಶದಲ್ಲಿ ಬದಲಾವಣೆ ಅನಿವಾರ್ಯವೂ ಹೌದು. ‘ಸುಸ್ಥಿರ ಭವಿಷ್ಯಕ್ಕಾಗಿ ನವೀನ ಕಲಿಕೆ' ಎನ್ನುವುದು ೨೦೨೩ರ ರಾಷ್ಟಿçÃಯ ಶಿಕ್ಷಣ ನೀತಿಯ ಧ್ಯೇಯ ವಾಕ್ಯ. ಕಲಿಕೆಯಲ್ಲಿ ನಾವೀನ್ಯತೆ ಎಂಬುದು ತಂತ್ರಜ್ಞಾನ ಯುಗದಲ್ಲಿ ಮೊತ್ತ ಮೊದಲ ಆದ್ಯತೆಯಾಗಿ ಸ್ವೀಕಾರಾರ್ಹ ನಿಜ. ಮಕ್ಕಳಿಗೆ ಬೇಕಾಗಿದ್ದ ಜೀವನ ಕೌಶಲ್ಯಗಳೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಬಯಸಿ ಉನ್ನತೀಕರಣ ಹೊಂದುತ್ತಿವೆ. ಮಕ್ಕಳು ಶಾಲಾ ಪೂರ್ವ ಹಂತದಲ್ಲಿ ಇಂದಿನ ಜಗತ್ತು ಬಯಸುವ ಕೌಶಲ್ಯಾಧಾರಿತ ನೈಪುಣ್ಯಗಳಿಕೆಯೊಂದೇ ಶಿಕ್ಷಣದ ಮೂಲ ಉದ್ದೇಶ ಎನ್ನುವಷ್ಟರ ಮಟ್ಟಿಗೆ ಪ್ರಭಾವಳಿಗೊಳಪಟ್ಟಿದೆ. ರಾಷ್ಟಿçÃಯ ಶಿಕ್ಷಣದ ಧ್ಯೇಯ ವಾಕ್ಯ ಬದಲಾದ ಪರಿಸ್ಥಿತಿ ಹಾಗೂ ಬದುಕಿನ ಅವಶ್ಯಕತೆಗಳಿಗೆ ಹೊಂದಿಕೊAಡು ಜೀವನ ಸಮನ್ವಯಕ್ಕೆ ಯುವ ಜನಾಂಗವನ್ನು ಸಜ್ಜುಗೊಳಿಸುವುದು.
ಈ ಉದ್ದೇಶಗಳೇನೋ ಅಭಿವೃದ್ಧಿ ಪಥದ ಸಾಧನೆಗೆ ಮುನ್ನುಡಿಯಂತಿವೆ. ಆದರೆ ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆದ್ಯತೆ ನೀಡದ ಶಿಕ್ಷಣ ವ್ಯವಸ್ಥೆಯಿಂದ ಬೇರೇನನ್ನು ಪಡೆದರೂ ದೃಢ ವ್ಯಕ್ತಿತ್ವ, ಸತ್ವರಹಿತ ಚಿಂತನೆಗಳು ರಾಷ್ಟç ನಿರ್ಮಾಣ ಕಾರ್ಯದಲ್ಲಿ ಏನು ಕೊಡುಗೆ ನೀಡಬಲ್ಲದು? ಬಲಿಷ್ಠ ಭಾರತದ ಅಡಿಪಾಯ ಇರುವುದು ಈ ದೇಶದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಯಲ್ಲಿ. ಇಂದಿನ ಮಕ್ಕಳಲ್ಲಿ ಅವರವರ ಬದುಕಿನ ಕುರಿತ ಚಿಂತನೆ, ಆಲೋಚನೆಗಳೆಲ್ಲವೂ ತನ್ನ ಧ್ಯೇಯ ಹಿತ ಸಾಧನೆಗಾಗಿಯೇ ಈ ಬದುಕು ಈ ಜೀವನ ಎನ್ನುವಷ್ಟು ಸ್ವಾರ್ಥ ಪರವಾಗಿ ಸಾಗುತ್ತಿದೆ. ತನ್ನನ್ನು ಹೊತ್ತು ಹೆತ್ತ ತಂದೆ - ತಾಯಿಯರನ್ನು ಕಡೆಗಾಣಿಸುವಷ್ಟು, ತನ್ನನ್ನು ಸಾಯುವವರೆಗೂ ಹೊರೆವ ಪ್ರಕೃತಿ ಮಾತೆಯನ್ನು ಅಲಕ್ಷಿಸುವಷ್ಟು ಈ ಜಗತ್ತನ್ನು ತನ್ನಂತೆ ಬದುಕಿ ಬಾಳಬೇಕಾದ ತನ್ನ ಮುಂದಿನ ಭವಿಷ್ಯದ ಕುಡಿಗಳಿಗಾಗಿ ರಕ್ಷಿಸಿಕೊಳ್ಳಬೇಕೆಂಬ ಪರಿವೆಯಿಲ್ಲದಷ್ಟು ಪರಹಿತ ಸಾಧನೆಗೆ ಸಂಪಾದನೆಯ ಒಂದAಶವನ್ನಾದರೂ ಕಾಪಿಡುವ ಬದಲು ಮೋಜು ಮಸ್ತಿಗಾಗಿ ವಾರಾಂತ್ಯ, ಮಾಸಾಂತ್ಯಕ್ಕಾಗಿ ಕಾಯುವಷ್ಟು, ರಾಜಕೀಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಹುಡುಕಿ ತೆಗೆದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವ ಬದಲು ವಿವೇಚನೆಯೇ ಇಲ್ಲದಂತೆ ರಾಜಕೀಯ ಪಕ್ಷಗಳಿಗೆ ಗಾಳವಾಗುವಷ್ಟು, ಸಣ್ಣ ಪುಟ್ಟ ಸಮಸ್ಯೆಗಳನ್ನು ಬುದ್ಧಿವಂತಿಕೆಯಿAದ ಯೋಚಿಸಿ ಪರಿಹಾರ ಕಂಡುಕೊಳ್ಳುವ ಕೌಶಲ್ಯವಿರದೆ, ಬದುಕಿನ ಅಡ್ಡಿ ಆತಂಕ, ಏಳು -ಬೀಳುಗಳಿಗೆ ಸಡ್ಡು ಹೊಡೆದು ನಿಲ್ಲದ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿರದ ಶಿಕ್ಷಣ ವ್ಯವಸ್ಥೆ ಸಾಧಿಸಿದ್ದು ಏನನ್ನು?
ಸ್ವಾಮಿ ವಿವೇಕಾನಂದರ ಘಂಟಾಘೋಷ ವಾಕ್ಯ ಕಬ್ಬಿಣದ ಮಾಂಸಖAಡ, ಉಕ್ಕಿನ ನರಮಂಡಲ ಇರುವ ಯುವಶಕ್ತಿಯೇ ರಾಷ್ಟç ನಿರ್ಮಾಣ ಕಾರ್ಯಕ್ಕೆ ಸಾಧನವಾಗಿರುವಂತದ್ದು. ಆದರೆ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗುತ್ತಿದೆಯೇ? ಶಾಲಾ ಹಂತದಲ್ಲಿರುವ ಮಕ್ಕಳ ಕಲಿಕೆ, ಆಟ ಪಾಠಗಳೆಲ್ಲವೂ ಬೆಳವಣಿಗೆಗೆ ಪೂರಕವಾಗಿಯೇ ಕಂಡು ಬಂದರೂ ಕಾಲೇಜು ಶಿಕ್ಷಣದ ಹಂತಕ್ಕೆ ಬಂದಾಗ ವಿದ್ಯಾರ್ಥಿಗಳಲ್ಲಿ ಸ್ವಯಂ ನಿರತ ಕರ್ತವ್ಯ ಪಾಲನೆ ಅನುಭವಕ್ಕೆ ಬರಲೇಬೇಕು. ಆದರೆ ಅಲ್ಲಿಯೂ ಅವರ ಅಶಿಸ್ತು, ನಡವಳಿಕೆಯಲ್ಲೂ ಅಹಮಿಕೆ, ದುರಭ್ಯಾಸ, ದುರ್ವರ್ತನೆಗಳನ್ನೇ ಬಹುಪಾಲು ಯುವ ಸಮುದಾಯದಲ್ಲಿ ಕಾಣುತ್ತಿದ್ದೇವೆ. ರಾಷ್ಟç ರಕ್ಷಣೆ, ಸಮಾಜ ನಿರ್ಮಾಣದ ಕಾರ್ಯವಿರಲಿ ಫ್ಯಾಷನ್, ಟ್ರೆಂಡ್ ಎಂಬ ಮೋಹ ಜಾಲದಲ್ಲಿ ಸಿಲುಕಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುವAತಹ ಮೂಢರ ಸೃಷ್ಟಿಯಾಗುತ್ತಿದೆ ಎಂದಾದಲ್ಲಿ ಶಿಕ್ಷಣದ ಉದ್ದೇಶ ಪಾಲನೆಯಾದುದು ಎಲ್ಲಿ?
ಹೌದು ನೈತಿಕ ಮೌಲ್ಯಗಳನ್ನೇ ಮೂಲ ಉದ್ದೇಶವನ್ನಾಗಿ ಹೊಂದಿದ ಶಿಕ್ಷಣ ವ್ಯವಸ್ಥೆ ಮತ್ತೆ ಮರಳಿ ಬರಬೇಕು. ‘ವೇದಗಳಿಗೆ ಹಿಂದಿರುಗಿ' ಎಂಬ ದಯಾನಂದ ಸರಸ್ವತಿಯವರ ಕೂಗು ಇದೇ ಸಾರವನ್ನು ಒತ್ತಿ ಹೇಳುತ್ತಿದೆ. ಎಲ್ಲವನ್ನೂ ಪಡೆದುಕೊಳ್ಳುವ ನಾವು ಬದುಕಿನ ಮೂಲ ಸಂತೋಷವನ್ನು ಕಳೆದುಕೊಳ್ಳಬಾರದು. ಬರಡು ಬದುಕಿಗೆಲ್ಲಿದೆ ಸಾರ್ಥಕತೆ? ಹೌದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲೇಬೇಕು. ಅಂಕ ದರ್ಜೆಗಳ ಹಿಂದೆ ಬಿದ್ದು ಮೌಖಿಕ, ಲಿಖಿತ ಬೌದ್ಧಿಕ ಶಕ್ತಿಯ ಮೇಲೆ ಮಗುವಿನ ಸಾಮರ್ಥ್ಯವನ್ನು ಮೌಲೀಕರಿಸುವ ಹಾಗೂ ಮಗುವಿನ ಇನ್ನಿತರ ಸದ್ಗುಣಗಳನ್ನು, ಸಾಮರ್ಥ್ಯವನ್ನು ನಿರ್ಲಕ್ಷಿಸಿ ವ್ಯಕ್ತಿತ್ತ್ವ ವಿಕಸನಕ್ಕೆ ತೊಡಕಾದ ಶಿಕ್ಷಣ ವ್ಯವಸ್ಥೆಯಿಂದ ತೃಪ್ತಿಕರ ಸಾಧನೆ ಸಾಧ್ಯವೇ ಇಲ್ಲ.
ಮಕ್ಕಳಲ್ಲಿ ಜೀವನ ಮೌಲ್ಯ, ಕೌಟುಂಬಿಕ ಮೌಲ್ಯ, ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯ, ನಮ್ಮ ಸನಾತನ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳಲ್ಲಿ ಗೌರವ- ಭಕ್ತಿಯಂತಹ ಆದರ್ಶ ಗುಣಗಳನ್ನು ಬೆಳೆಸುವುದು ಶಿಕ್ಷಣದ ಮೂಲ ಮಂತ್ರವಾಗಲಿ. ಸಂಕೀರ್ಣತೆಯಿAದ ಸಮಗ್ರತೆಯೆಡೆಗೆ, ಅನೈಕ್ಯದಿಂದ ಏಕತೆಯೆಡೆಗೆ, ಚಂಚಲತೆಯಿAದ ಪಕ್ವತೆಯೆಡೆಗೆ ಸಾಗುವ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ವ್ಯವಸ್ಥೆ ಪೂರಕವಾಗಲಿ. ಭಾರತದ ವೈವಿಧ್ಯಮಯ ಸಂಕೀರ್ಣ ಸಂಸ್ಕೃತಿಯ ಪ್ರತಿಪಾದಕರೂ ಆಗಿದ್ದ ಅಜಾದ್ ಅವರ ಜನ್ಮ ದಿನಾಚರಣೆ ಈ ಮೂಲಕ ಸಾರ್ಥಕವಾಗಲಿ ಎಂದು ಹಾರೈಸೋಣ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,
ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.