ಕುಶಾಲನಗರ, ನ. ೧೦: ದೆಹಲಿಯ ವಾಯುಮಾಲಿನ್ಯ ಪರಿಣಾಮ ಜಿಲ್ಲೆಯ ಕುಶಾಲನಗರದ ಕಾಫಿ ಉದ್ಯಮಿ ಬಲಿಯಾಗಿದ್ದಾರೆ.

ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದ ನಿವಾಸಿ ಕುಶಾಲನಗರದಲ್ಲಿ ಕಾಫಿ ಉದ್ಯಮ ನಡೆಸುತ್ತಿದ್ದ ನರೇಂದ್ರ ಹೆಬ್ಬಾರ್ (೫೬) ಮೃತಪಟ್ಟ ದುರ್ದೈವಿ.

ದೆಹಲಿಯಲ್ಲಿ ಕಾಫಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನರೇಂದ್ರ ಅವರು ಅಲ್ಲಿನ ವಾಯುಮಾಲಿನ್ಯಕ್ಕೆ ತುತ್ತಾಗಿ ಕೂಡಲೇ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಆರೋಗ್ಯ ಸುಧಾರಿಸದೆ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೃತ ನರೇಂದ್ರ ಅವರು ಕುಶಾಲನಗರದಲ್ಲಿ ಎರಡು ದಶಕಗಳ ಕಾಲ ಕಾಫಿ ಉದ್ಯಮಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಸಮೀಪದ ಕೊಪ್ಪ ಗ್ರಾಮದಲ್ಲಿ ಕೆಫೆ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕುಶಾಲನಗರ ರೋಟರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು. ಪತ್ನಿ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.