ಶನಿವಾರಸಂತೆ, ನ. ೧೦: ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಅಭಿವೃದ್ಧಿಗೆ ಸದಸ್ಯರ ಜತೆ ವರ್ತಕರೂ ಕೈಜೋಡಿಸಬೇಕು ಎಂದು ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಮಹಾಸಂಸ್ಥೆ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ಥಾನೀಯ ಸಮಿತಿ ೨೦೨೨-೨೩ನೇ ಸಾಲಿನ ವಾರ್ಷಿಕ ಶನಿವಾರಸಂತೆ, ನ. ೧೦: ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಅಭಿವೃದ್ಧಿಗೆ ಸದಸ್ಯರ ಜತೆ ವರ್ತಕರೂ ಕೈಜೋಡಿಸಬೇಕು ಎಂದು ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಮಹಾಸಂಸ್ಥೆ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ಥಾನೀಯ ಸಮಿತಿ ೨೦೨೨-೨೩ನೇ ಸಾಲಿನ ವಾರ್ಷಿಕ ಜಿಲ್ಲೆಯಲ್ಲಿ ೨೩ ಸ್ಥಾನೀಯ ಸಮಿತಿಗಳಿವೆ ಸಂಘದ ಸದಸ್ಯರು ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಬ್ಯಾಂಕ್ ನಿರ್ದೇಶಕ ಮುನೀರ್ ಅಹಮ್ಮದ್ ಮಾತನಾಡಿ, ವರ್ತಕರ ಒಕ್ಕೂಟದಲ್ಲಿ ಒಗ್ಗಟ್ಟು ಮುಖ್ಯವಾಗಿದ್ದು ಸಹಕಾರ ಅತ್ಯಗತ್ಯ. ವರ್ತಕ ಸಮುದಾಯವೂ ದೇಶದ ಬೆನ್ನೆಲುಬಾಗಿದ್ದು ಆರ್ಥಿಕತೆಯ ಮುಖ್ಯ ಆಧಾರವಾಗಿದೆ. ವರ್ತಕರು ತಮ್ಮ ಸಮಸ್ಯೆಗಳಿಗೆ ಮಹಾಸಭೆಯಲ್ಲಿ ಉತ್ತರ ಪಡೆಯಬಹುದಾಗಿದೆ ಎಂದರು.
ಸಭೆಯಲ್ಲಿ ಕೆಲ ವರ್ತಕರು ಚರ್ಚೆಯಲ್ಲಿ ಪಾಲ್ಗೊಂಡು ಪಟ್ಟಣದಲ್ಲಿನ ಸಂತೆ ಮಾಳ ಹಾಗೂ ರಸ್ತೆ, ಮಾರುಕಟ್ಟೆಯಲ್ಲಿನ ನೀರು, ಶೌಚಾಲಯ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಪಾರ್ಕಿಂಗ್ ವ್ಯವಸ್ಥೆ ವಿದ್ಯುತ್ ಬೀದಿ ನಾಯಿಗಳ, ಬೀಡಾಡಿ ದನಗಳ ಹಾವಳಿಯ ಬಗ್ಗೆಯೂ ಚರ್ಚಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ದಿವಾಕರ್ ಸ್ಪಂದಿಸಿ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲಾಗುವುದು. ಹೊಸ ಅಂಗಡಿಗಳ ಮಾಲೀಕರು ಸಂಘದ ಸದಸ್ಯರಾಗಬಹುದು ಎಂದರು. ಸಂಘದ ಗೌರವ ಅಧ್ಯಕ್ಷ ಎಚ್.ಸಿ.ಯತೀಶ್ ಕುಮಾರ್ ಮಾತನಾಡಿ, ಆರ್ಥಿಕ ಸಮಸ್ಯೆಯ ನಡುವೆಯೂ ಸಂಘ ಬೆಳೆದು ಬಂದಿದೆ. ನಿರ್ದೇಶಕರು ಮತ್ತು ಸದಸ್ಯರ ನಡುವೆ ಒಗ್ಗಟ್ಟಿರಬೇಕು ಆರ್ಥಿಕ ಸಂಕಷ್ಟದಿAದ ಸ್ವಂತ ಕಟ್ಟಡ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವರ್ತಕರಾದ ಎಚ್.ಎಸ್.ಶಿವರಾಜ್, ಸಿ.ಎಸ್.ಷಣ್ಮುಖ ಹಾಗೂ ಸಂಘದ ಗೌರವ ಅಧ್ಯಕ್ಷ ಎಚ್.ಸಿ.ಯತೀಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ.ಯತೀಶ್ ಮಾತನಾಡಿ, ಸರ್ವ ಸದಸ್ಯರ, ವರ್ತಕರ ಸಹಕಾರವಿದ್ದರೆ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.
ಸ್ಥಾನೀಯ ಸಮಿತಿ ಆಡಳಿತ ಮಂಡಳಿಯ ಜಿಲ್ಲಾ ನಿರ್ದೇಶಕ ಜಿ.ಆರ್.ಸುಬ್ರಮಣ್ಯ, ಉಪಾಧ್ಯಕ್ಷರಾದ ಡಿ.ವಿ.ದಿನೇಶ್. ಎಚ್.ಜೆ.ಪ್ರವೀಣ್, ಕೆ.ಟಿ.ಸುಬ್ರಮಣ್ಯಾಚಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ದಿವಾಕರ್, ನಿರ್ದೇಶಕರಾದ ಎಚ್.ಎಂ. ರಾಜಶೇಖರ್, ಕೆ.ಎಂ.ವಹಾಬ್, ಮಂಗಲ್ ಜಿ ಹಾಗೂ ಆನಂದೇಗೌಡ ಉಪಸ್ಥಿತರಿದ್ದರು. ವರ್ತಕ ಮುಷರತ್ ಪಾಷ ಪ್ರಾರ್ಥಿಸಿದರು. ಬಿ.ಕೆ.ಯತೀಶ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು.