ವೀರಾಜಪೇಟೆ, ನ. ೮: ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ವೀರಾಜಪೇಟೆ ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬ್ಯಾಂಕ್‌ನ ಠೇವಣಿದಾರರು ಮತ್ತು ಖಾತೆ ಹೊಂದಿರುವವರು ತನಿಖೆಗೆ ಸಹಕರಿಸುವಂತೆ ಸಿ.ಐ.ಡಿ ಘಟಕದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕ್ ಸೊಸೈಟಿಯಲ್ಲಿ ನಡೆದ ಅಕ್ರಮಗಳು ಮತ್ತು ಸುಮಾರು ೫ ಕೋಟಿಗೂ ಮಿಗಿಲಾದ ಅವ್ಯವಹಾರದ ತನಿಖೆ ಮಾಡುವಂತೆ ಬ್ಯಾಂಕ್ ಗ್ರಾಹಕರು ಮತ್ತು ಠೇವಣಿದಾರರು ೨೦೨೧ ರಲ್ಲಿ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ನಗರ ಠಾಣೆಯ ಠಾಣಾಧಿಕಾರಿಗಳು ಮತ್ತು ವೀರಾಜಪೇಟೆ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಪ್ರಾಥಮಿಕ ಹಂತದ ತನಿಖೆ ಕೈಗೊಂಡು ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ ಘಟಕಕ್ಕೆ ಪ್ರಕರಣ ವರ್ಗಾವಣೆಗೊಂಡಿತ್ತು.

ಸಿ.ಐ.ಡಿ ವಿಭಾಗವು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಹಂತದಲ್ಲಿದೆ. ಈ ನಡುವೆ ಕೊಡಗು ಉಪವಿಭಾಗಧಿಕಾರಿಯನ್ನು ತನಿಖಾಧಿಕಾರಿಗಳಾಗಿ ನೇಮಕ ಮಾಡಿ ಸಕ್ಷಮ ಪ್ರಾಧಿಕಾರ ರಚನೆ ಮಾಡಿ ತನಿಖೆಗೆ ಸಹಕರಿಸುವಂತೆ ಸಿ.ಐ.ಡಿ ಘಟಕವು ಮನವಿ ಮಾಡಿತ್ತು. ಮನವಿ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅಧೀನದಲ್ಲಿ ತನಿಖೆ ಮುಂದುವರೆದಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿ ಎನ್ನಲಾದ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇವರುಗಳು ಠಾಣೆಯ ಠಾಣಾಧಿಕಾರಿಗಳು ಮತ್ತು ವೀರಾಜಪೇಟೆ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಪ್ರಾಥಮಿಕ ಹಂತದ ತನಿಖೆ ಕೈಗೊಂಡು ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ ಘಟಕಕ್ಕೆ ಪ್ರಕರಣ ವರ್ಗಾವಣೆಗೊಂಡಿತ್ತು.

ಸಿ.ಐ.ಡಿ ವಿಭಾಗವು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಹಂತದಲ್ಲಿದೆ. ಈ ನಡುವೆ ಕೊಡಗು ಉಪವಿಭಾಗಧಿಕಾರಿಯನ್ನು ತನಿಖಾಧಿಕಾರಿಗಳಾಗಿ ನೇಮಕ ಮಾಡಿ ಸಕ್ಷಮ ಪ್ರಾಧಿಕಾರ ರಚನೆ ಮಾಡಿ ತನಿಖೆಗೆ ಸಹಕರಿಸುವಂತೆ ಸಿ.ಐ.ಡಿ ಘಟಕವು ಮನವಿ ಮಾಡಿತ್ತು. ಮನವಿ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅಧೀನದಲ್ಲಿ ತನಿಖೆ ಮುಂದುವರೆದಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿ ಎನ್ನಲಾದ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇವರುಗಳು ವ್ಯವಹರಿಸಿರುವ ಎಲ್ಲಾ ಗ್ರಾಹಕರು ತನಿಖಾ ಕೇಂದ್ರಕ್ಕೆ ತಮ್ಮ ದಾಖಲೆ ಪತ್ರಗಳನ್ನು ನೀಡುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಸಿ.ಐ.ಡಿ. ಘಟಕ ಬೆಂಗಳೂರು ಡಿ.ವೈಎಸ್ಪಿ ಎನ್. ಶ್ರೀಹರ್ಷ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಈಗಾಗಲೇ ಕಳೆದ ೫ ದಿನಗಳಿಂದ ಬೆಂಗಳೂರಿನ ಸಿಐಡಿ ಘಟಕದ ಉಪ ಪೊಲೀಸ್ ಅಧೀಕ್ಷಕರಾದ ಎನ್. ಶ್ರೀಹರ್ಷ ತಂಡದ ಇನ್ಸ್ಪೆಕ್ಟರ್‌ಗಳಾದ ವಿನೋದ್, ರಮೇಶ್ ಹಾಗೂ ಇತರರು ತನಿಖೆಯನ್ನು ಅಂತಿಮಗೊಳಿಸುವತ್ತ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ, ಗ್ರಾಹಕರ ದೂರಿನ ಅರ್ಜಿಯಂತೆ ೫.೫೦ಕೋಟಿ ಹಣ ಗ್ರಾಹಕರಿಗೆ ಸಿಗಬೇಕಾಗಿದೆ.

- ವರದಿ : ಕಿಶೋರ್ ಶೆಟ್ಟಿ, ಹೆಚ್.ಕೆ. ಜಗದೀಶ್