ವೀರಾಜಪೇಟೆ: ವೀರಾಜ ಪೇಟೆಯ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಕನ್ನಡ ಉಪನ್ಯಾಸಕ ಸುನೀಲ್ ಬಿ.ಬಿ. ಮಾತನಾಡಿ, ಕನ್ನಡ ಭಾಷೆಯು ಇತರ ಭಾಷೆಗಳಿಗಿಂತ ವಿಭಿನ್ನವಾಗಿದ್ದು, ವೈಶಿಷ್ಟ÷್ಯಪೂರ್ಣ ವಾಗಿದೆ. ಅನೇಕ ಶ್ರೇಷ್ಠ ಗ್ರಂಥಗಳು ಪ್ರಕಟಗೊಂಡಿದ್ದು, ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ತನ್ನದಾಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ದಿಲನ್ ಐ.ಎಂ. ಮಾತನಾಡಿದರು. ಭಾಷಾ ವಿಷಯದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸ ಲಾಯಿತು. ಕನ್ನಡ ಉಪನ್ಯಾಸಕ ಪ್ರದೀಪ್ ಬಿ.ಇ., ಗಣಕ ವಿಜ್ಞಾನ ಉಪನ್ಯಾಸಕಿ ಕುಮಾರಿ ಮಹೇಶ್ವರಿ ಇದ್ದರು. ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿದಂತೆ ಕನ್ನಡ ಸಂಸ್ಕöÈತಿ ಪರಂಪರೆ ಸಾರುವ ಗೀತೆಗಳ ಸಮೂಹ ಗಾಯನದ ಜೊತೆಗೆ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ಜರುಗಿತು.