ಮಡಿಕೇರಿ, ನ. ೭: ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ ಸಮುದಾಯದವರಿಗೆ ಆರ್ಥಿಕ ಅಭಿವೃದ್ಧಿಯನ್ನು ಹೊಂದಲು ವಿವಿಧ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೭೨-೨೨೫೫೩೧ ಅನ್ನು ಸಂಪರ್ಕಿಸಬಹುದು.

ಯೋಜನೆಗಳ ವಿವರ: ಪರಿಶಿಷ್ಟ ಜಾತಿಯವರಿಗೆ ಸ್ವಯಂ-ಉದ್ಯೋಗ (ನೇರಸಾಲ) ಯೋಜನೆ(ಘಟಕ ವೆಚ್ಚ ರೂ. ೧ ಲಕ್ಷ), ಉದ್ಯಮಶೀಲತಾ ಯೋಜನೆ (ಘಟಕ ವೆಚ್ಚ ರೂ. ೨ ಲಕ್ಷ), ಉದ್ಯಮಶೀಲತಾ ಯೋಜನೆ (ಸರಕು ಸಾಗಣಿಕೆ-ನಾಲ್ಕು ಚಕ್ರಗಳ ವಾಹನ ಮತ್ತಿತರ) (ಘಟಕ ವೆಚ್ಚ ರೂ.೪ ಲಕ್ಷ), ಭೂ ಒಡೆತನ ಯೋಜನೆ, ಪರಿಶಿಷ್ಟ ಪಂಗಡದವರಿಗೆ ಸ್ವಯಂ-ಉದ್ಯೋಗ (ನೇರಸಾಲ) ಯೋಜನೆ(ಘಟಕ ವೆಚ್ಚ ರೂ. ೧ ಲಕ್ಷ), ಉದ್ಯಮಶೀಲತಾ ಯೋಜನೆ (ಘಟಕ ವೆಚ್ಚ ರೂ. ೨ ಲಕ್ಷ), ಉದ್ಯಮಶೀಲತಾ ಯೋಜನೆ (ಸರಕು ಸಾಗಣಿಕೆ-ನಾಲ್ಕು ಚಕ್ರಗಳ ವಾಹನ ಹಾಗೂ ಇತ್ಯಾದಿ) (ಘಟಕ ವೆಚ್ಚ ರೂ. ೪ ಲಕ್ಷ), ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬAಧಿಸಿದ ದಾಖಲಾತಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ-೯೪೮೦೮೪೩೧೫೫, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ-೯೪೮೦೮೪೩೧೫೬ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆ-೯೪೮೦೮೪೩೧೫೭ ಇಲ್ಲಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪ್ರೋತ್ಸಾಹ ಧನಕ್ಕೆ

ಪ್ರಸಕ್ತ ಸಾಲಿಗೆ ಐಐಟಿ, ಐಐಐಟಿ, ಐಐಎಂ, ಐಐಎಸ್‌ಸಿ, ಎನ್‌ಐಟಿ, ಐಐಎಸ್‌ಇಆರ್, ಎಐಐಎಂಎಸ್, ಎನ್‌ಎಲ್‌ಯು, ಐಎನ್‌ಐ ಮತ್ತು ಐಯುಎಸ್‌ಎಲ್‌ಎ ಮುಂತಾದ ಪ್ರತಿಷ್ಠಿತ ರಾಷ್ಟಿçÃಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಅವಧಿಯಲ್ಲಿ ಒಂದು ಬಾರಿ ತಲಾ ಎರಡು ಲಕ್ಷಗಳ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನ ಆಜಾದ್ ಭವನ ಎಫ್‌ಎಂಸಿ ಕಾಲೇಜು ಹತ್ತಿರ ಮಡಿಕೇರಿ ಇವರನ್ನು ಹಾಗೂ ದೂರವಾಣಿ ಸಂಖ್ಯೆ ೦೮೨೭೨೨೨೫೫೨೮ ಹಾಗೂ ೦೮೨೭೨೨೨೦೨೧೪ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ

ಪ್ರಸಕ್ತ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಷ್ಟಿçÃಯ ವಿದೇಶಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪೋಷಕರ ವಾರ್ಷಿಕ ಆದಾಯ ರೂ.೬ ಲಕ್ಷಗಳ ಒಳಗಿದ್ದಲ್ಲಿ ೨ ವರ್ಷಗಳ ಕೋರ್ಸ್ಗೆ ಗರಿಷ್ಠ ರೂ.೨೦ ಲಕ್ಷ ಹಾಗೂ ರೂ.೬ ಲಕ್ಷದಿಂದ ರೂ.೧೫ ಲಕ್ಷಗಳ ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್ಗೆ ರೂ. ೧೦ ಲಕ್ಷ ಗರಿಷ್ಠ ಮಿತಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಇಲಾಖಾ ವೆಬ್‌ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕಚೇರಿಯನ್ನು ಹಾಗೂ ದೂ.ಸಂ.೦೮೨೭೨-೨೨೫೫೨೮ ಹಾಗೂ ಮಾಹಿತಿ ಕೇಂದ್ರ, ಮಡಿಕೇರಿ ೦೮೨೭೨-೨೨೦೨೧೪ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ. ದಿವಾಕರ ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ

ಪ್ರಸಕ್ತ ಸಾಲಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡ ಜನರ ಆರ್ಥಿಕ ಅಭಿವೃದ್ಧಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ), ಮೈಕ್ರೋ ಕ್ರೆಡಿಟ್ ಯೋಜನೆ(ನೋಂದಾಯಿತ ಸ್ವ-ಸಹಾಯ ಮಹಿಳಾ ಸಂಘಗಳು), ಗಂಗಾ ಕಲ್ಯಾಣ, ಭೂ ಒಡೆತನ ಯೋಜನೆಯಡಿ ನಿಗಮದಿಂದ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೨೯ ಕೊನೆಯ ದಿನವಾಗಿದೆ. ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ hಣಣಠಿs://ಞmvsಣಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪಡೆದುಕೊಳ್ಳಬಹುದು. ಫಲಾಪೇಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿ ಮತ್ತು ದಾಖಲಾತಿಗಳನ್ನು ಸೇವಾ ಸಿಂಧು/ ಗ್ರಾಮಒನ್ ತಂತ್ರಾAಶದ ವೆಬ್‌ಸೈಟ್ ವಿಳಾಸ hಣಣಠಿs://sevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ-೫೭೧೨೦೧ ದೂ. ೦೮೨೭೨-೨೨೮೮೫೭ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತಿಳಿಸಿದ್ದಾರೆ.