ಶನಿವಾರಸಂತೆ, ನ. ೭: ಪಟ್ಟಣದ ಶ್ರೀ ಏಕದಂತ ಟ್ರ‍್ಯಾಕ್ಟರ್ ಒಕ್ಕೂಟದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಭಾನುವಾರ ವಿಜೃಂಭಣೆಯಿAದ ಜರುಗಿತು.

ಗೌರಿ-ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟು ೪೦ ದಿನಗಳ ಕಾಲ ಪೂಜಿಸುತ್ತಿದ್ದು, ಭಾನುವಾರ ಬೆಳಿಗ್ಗೆ ೧೧ ಗಂಟೆಯಿAದ ವಿದ್ಯುಕ್ತವಾಗಿ ಹೋಮ-ಹವನ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗವಾಯಿತು. ಸಂಜೆ ೪ ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಂಜೆ ೫ ಗಂಟೆಗೆ ವಿದ್ಯುತ್ ಬಲ್ಬ್ಗಳಿಂದ ಅಲಂಕೃತಗೊAಡ ಭವ್ಯ ಮಂಟಪದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ, ಹಾಸನದ ಪ್ರಜ್ವಲ್ ಪ್ರಚಂಡ ವೀರಗಾಸೆ ತಂಡದ ವತಿಯಿಂದ ಲಿಂಗದ ವೀರರ ಕುಣಿತ ಮತ್ತು ಭದ್ರಕಾಳಿ ಕುಣಿತ, ಲೋಬೋ ಡಿ.ಜೆ. ಸೌಂಡ್ಸ್ ರವರ ಡಿ.ಜೆ, ಹಿಂದೂ ಟೈಗರ್ಸ್ ವಾದ್ಯ ಗೋಷ್ಠಿ, ಗುರುವಾಯನಕೆರೆಯ ಶ್ರೀ ಆಂಜನೇಯ ಸ್ವಾಮಿ ಹಾಗೂ ಗೊಂಬೆ ಮೇಳದೊಂದಿಗೆ ಶನಿವಾರಸಂತೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ರಾತ್ರಿ ೭ ಗಂಟೆಯಿAದ ೧೦ ಗಂಟೆಯವರೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಗುಡುಗು ಸಹಿತ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನು ಲೆಕ್ಕಿಸದೆ ಡಿಜೆ ಸೌಂಡಿಗೆ ತಕ್ಕಂತೆ ಸಾರ್ವಜನಿಕರು ವಯೋಭೇದ ಮರೆತು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ೧೦ ಗಂಟೆಯ ನಂತರ ಮತ್ತೆ ಮೆರವಣಿಗೆ ಚಂಗಡಹಳ್ಳಿಯ ಮುಖ್ಯ ರಸ್ತೆಯಲ್ಲಿ ಸಾಗಿ ಸೋಮವಾರ ಬೆಳಗ್ಗಿನ ಜಾವ ೧-೩೦ ಕ್ಕೆ ಕಾಜೂರು ಹೊಳೆಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಶ್ರೀ ಏಕದಂತ ಟ್ರಾö್ಯಕ್ಟರ್ ಒಕ್ಕೂಟ ಸಮಿತಿಯ ಅಧ್ಯಕ್ಷ ಸಣ್ಣ ಧರ್ಮರಾಜ್, ಉಪಾಧ್ಯಕ್ಷ ಗೋಪಿ, ಕಾರ್ಯದರ್ಶಿ ಎಡ್ಚ ಪ್ರವೀಣ್, ನಿರ್ದೇಶಕರು, ಸದಸ್ಯರು ಹಾಜರಿದ್ದರು.೭ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪೂಜಾ ಕೈಂಕರ್ಯ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಶನಿವಾರಸಂತೆ ಹಾಗೂ ಕುಶಾಲನಗರ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಪೂಜೆ, ಮೆರವಣಿಗೆ ಹಾಗೂ ವಿಸರ್ಜನಾ ಸಂದರ್ಭ ಹಾಜರಿದ್ದು ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.