ಮಡಿಕೇರಿ, ನ. ೭: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ೮ ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‌ಲೈನ್ ವೇದಿಕೆ ತಂತ್ರಾAಶದಡಿ ಅಳವಡಿಸಲಾಗಿದೆ. ಆದ್ದರಿಂದ ಈ ೮ ಯೋಜನೆಗಳಿಗೆ ೨೦೨೩-೨೪ನೇ ಸಾಲಿಗೆ ವಿಶೇಷಚೇತನ ಫಲಾನುಭವಿಗಳು ಆನ್‌ಲೈನ್ ಮೂಲಕ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ. gov.iಟಿ/Sevಚಿsiಟಿಜhu/ಆeಠಿಚಿಡಿಣmeಟಿಣSeಡಿviಛಿes ಏಚಿಟಿಟಿಚಿಜಚಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ ೧೫ ರವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ವಿಶೇಷ ಚೇತನರು ನವೆಂಬರ್ ೧೫ ರೊಳಗೆ ಅರ್ಜಿ ಸಲ್ಲಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೋರಿದ್ದಾರೆ.

ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ.

ಹೆಚ್ಚಿನ ಮಾಹಿತಿಗೆ ೩ ತಾಲೂಕಿನ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲೂಕಿನ ರಾಜೇಶ್- ೮೦೭೩೧೯೨೯೧೪, ಸೋಮವಾರಪೇಟೆ ತಾಲ್ಲೂಕಿನ ಹರೀಶ್ ಟಿ.ಆರ್ - ೯೦೦೮೬೮೫೧೨೯ ಹಾಗೂ ವೀರಾಜಪೇಟೆ ತಾಲೂಕಿನ ಪ್ರಥನ್ ಕುಮಾರ್ ಸಿ.ಬಿ - ೯೯೦೦೮೮೩೬೫೪ನ್ನು ಸಂಪರ್ಕಿಸುವAತೆ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ ೦೮೨೭೨-೨೯೫೮೨೯ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ.