ಮಡಿಕೇರಿ, ನ. ೬: ನಗರದ ಹೊರವಲಯದ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ತಾ. ೧೩ ರಂದು ದೀಪಾವಳಿ ಅಂಗ ವಾಗಿ ಅಮವಾಸೆ ದೀಪೋತ್ಸವ ಹಮ್ಮಿ ಕೊಳ್ಳಲಾಗಿದೆ ಎಂದು ಧರ್ಮದರ್ಶಿ ಗೋವಿಂದ ರಾಜು ಸ್ವಾಮಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ ೭.೩೦ಕ್ಕೆ ಕಳಸಪೂಜೆ, ೮ ಗಂಟೆಗೆ ಅನ್ನದಾನ, ೯ ಗಂಟೆಗೆ ತಾಯಿಯ ದರ್ಶನದ ಬಳಿಕ ೯.೩೦ ರಿಂದ ದೀಪೋತ್ಸವ ಪ್ರಾರಂಭಗೊಳ್ಳಲಿದೆ. ೧೦೮ ಎಳ್ಳುಬತ್ತಿ ಹಚ್ಚಿದರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಈ ಬಾರಿಯೂ ಈ ಆಚರಣೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಾಲಯ ಟ್ರಸ್ಟಿಗಳಾದ ಹೆಚ್.ಎಸ್. ದೇವರಾಜು, ರಾಜೇಶ್ವರಿ, ಸಚಿನ್ ವಾಸುದೇವ್, ಭಕ್ತ ಚುಮ್ಮಿ ದೇವಯ್ಯ ಹಾಜರಿದ್ದರು.